Header Ads
Header Ads
Header Ads
Breaking News

ನವಜಾತ ಶಿಶುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಡೆದ ಪ್ರಥಮ ಚಿಕಿತ್ಸೆ ಮಗು ಆರೋಗ್ಯವಾಗಿದೆ ಎಂದ ವೈದ್ಯ ತಂಡ

ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನವಜಾತ ಶಿಶು, ಅಂದರೆ ಹುಟ್ಟಿ 11 ದಿನವಷ್ಟೇ ಆಗಿದ್ದ ಮಗುವಿಗೆ ಯಶಸ್ವೀಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಹುಟ್ಟಿ ಕೆಲವೇ ಗಂಟೆಗಳಲ್ಲಿ ಈ ಮಗುವಿಗೆ ಉಸಿರಾಡಲು ಕಷ್ಟವಾಗುತ್ತಿತ್ತು. ಹೃದಯದ ಬಡಿತ ತೀವ್ರವಾಗಿತ್ತು ಮತ್ತು ಚರ್ಮ ತಣ್ಣಗಾಗಿತ್ತು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ದೊಡ್ಡರಕ್ತನಾಳದ ಸ್ಥಾನ ಪಲ್ಲಟವಾಗಿರೋದು ತಿಳಿದು ಬಂತು. ಇದೊಂದು ಗಂಭೀರ ಹೃದಯ ನ್ಯೂನತೆಯಾಗಿದ್ದು, ಗರ್ಭ ಧರಿಸಿದ ಎಂಟು ವಾರಗಳಲ್ಲಿ ಭ್ರೂಣದ ಹೃದಯ ಅಸಹಜ ಬೆಳವಣಿಗೆಯಾಗಿದ್ದೇ ಈ ಸಮಸ್ಯೆಗೆ ಕಾರಣ. ಹೃದಯದಿಂದ ಶ್ವಾಸಕೋಶಕ್ಕೆ ಮತ್ತು ದೇಹದ ಇತರ ಭಾಗಕ್ಕೆ ರಕ್ತವನ್ನು ಕೊಂಡೊಯ್ಯುವ ನಾಳಗಳು ಅದಲು ಬದಲಾಗಿತ್ತು. ಹನ್ನೊಂದೇ ದಿನದಲ್ಲಿ ಮಗುವಿಗೆ ಹೃದಯದ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಡಾ.ಅರವಿಂದ ಬಿಜೋಯ್ ಅವರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರೈಸಿದ್ದಾರೆ. ಇದೀಗ ಮಗುವಿನ ಆರೋಗ್ಯ ಸುಧಾರಿಸುತ್ತಿದೆ.

Related posts

Leave a Reply