Breaking News

ನವಜಾತ ಶಿಶುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ : ಮಣಿಪಾಲ್ ವೈದ್ಯರ ತಂಡದಿಂದ ಚಿಕಿತ್ಸೆ

ನವಜಾತ ಶಿಶುವಿನಲ್ಲಿ ಕಂಡು ಬಂದ ಹೃದಯದ ಸಮಸ್ಯೆಯನ್ನು ಮಣಿಪಾಲ್ ಆಸ್ಪತ್ರೆಯ ಡಾ.ದೇವಾನಂದ ಎನ್.ಎಸ್. ನೇತೃತ್ವದ ವೈದ್ಯರ ತಂಡ ಅತ್ಯಂತ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಗುಣಮುಖವಾಗಿಸಿದೆ. ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಣಿಪಾಲ್ ಆಸ್ಪತ್ರೆಯ ಡಾ.ದೇವಾನಂದ ಅವರು, ಕಾರ್ಕಳ ತಾಲೂಕಿನ ಮಿಯಾರ್‌ನ ಪರಮೇಶ್ವರ್ ಮತ್ತು ಗೋಮತಿ ದಂಪತಿಗೆ ಜನಿಸಿದ ಮಗು 1.75ಕೆಜಿ ತೂಕವಿದ್ದು, ತಪಾಸಣೆ ನಡೆಸಿದಾಗ ಹೃದಯದ ತೊಂದರೆ ಕಾಣಿಸಿಕೊಂಡಿತ್ತು. ತೀವ್ರ ಮುನ್ನೆಚ್ಚರಿಕೆ ವಹಿಸಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಮಗುವಿನ ಆರೋಗ್ಯ ಸುಧಾರಿಸುವಂತೆ ಮಾಡಲಾಗಿದೆ ಎಂದರು.ಮಗುವಿನ ತಂದೆ ಪರಮೇಶ್ವರ್ ಮಾತನಾಡಿ, ಇದೊಂದು ದೊಡ್ಡ ಸಮಸ್ಯೆಯಾಗಿ ಉದ್ಘಬಿಸಿತ್ತು. ನಾವೂ ಏನು ಮಾಡಬೇಕೆಂಬ ಭಯದಲ್ಲಿದಾಗ ಕೆ‌ಎಂಸಿ ಆಸ್ಪತ್ರೆಯ ವೈದ್ಯರು ಸಲಹೆ ಮೇರೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು,
ಇದೀಗ ಮಗು ಗುಣ ಮುಖವಾಗಿದೆ ಅಂತಾ ಅವರು ಹೇಳಿದ್ರು.
ಈ ಸಂದರ್ಭ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಕುಲ್‌ದೀಪ್ ಬೆಹೆರಾ, ಪ್ರೊಡಕ್ಟ್ ಮ್ಯಾನೇಜರ್ ನಿಶಾನ್, ಮಗುವಿನ ಹೆತ್ತವರಾದ ಗೋಮತಿ ಉಪಸ್ಥಿತರಿದ್ದರು.
ನಾಗೇಶ್ ಕಾವೂರು

Related posts

Leave a Reply