Header Ads
Header Ads
Header Ads
Breaking News

ನವಯುಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಎಸ್‌ಪಿ ಮತ್ತು ಎಸಿ ಸುಂಕ ವಸೂಲಾತಿ ಕೇಂದ್ರದ ಬಳಿ ಸ್ವಚ್ಚತೆ ಕಾಪಾಡಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ

ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನವಯುಗ ಅಧಿಕಾರಿಗಳಿಗೆ ಜಿಲ್ಲಾ ಎಸ್‌ಪಿ ಹಾಗೂ ಎಸಿ ಯವರು ತರಾಟೆಗೆ ತೆಗೆದುಕೊಂಡರು… ಮಾತ್ರವಲ್ಲದೆ ನಮ್ಮ ಬೇಡಿಕೆಗ ಬಗ್ಗೆ ಚರ್ಚಿಸಿ ಕೇವಲ 2 ದಿನಗಳಲ್ಲಿ ಸುಂಕ ವಸೂಲಾತಿ ಕೇಂದ್ರದ ಬಳಿ ಸಂಪೂರ್ಣ ಸ್ವಚ್ಛತೆ ಮಾಡಬೇಕು ಎಂದು ಆಗ್ರಹಿಸಿದ್ದರು.

ಟೋಲ್ ಬೂತ್‌ನ ಎಲ್ಲಾ ಗೇಟುಗಳನ್ನು ತೆರೆದಿಟ್ಟು ಯಾವುದೇ ರೀತಿ ಟ್ರಾಫಿಕ್ ಜಾಮ್ ಆಗದಂತೆ, ಅಲ್ಲದೇ 15 ದಿನಗಳ ಒಳಗೆ ಡಿವೈಡರ್ ನಲ್ಲಿ ಬೆಳೆದಿರುವ ಹುಲ್ಲನ್ನು ಕಟಾವು ಮಾಡುವಂತೆ, ಹಾಗೂ ಬಾಕಿಯಿರುವ ಎಲ್ಲಾ ಕಾಮಾಗಾರಿಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕೆಂದು ಗಡುವಿನೊಂದಿಗೆ ಎಚ್ಚರಿಕೆ ನೀಡಿದರು..

ಹಾಗೂ ತಿಂಗಳ ಅಂತ್ಯಕ್ಕೆ ಪರಿಶೀಲನಾ ಸಭೆ ನಡೆಸುವುದೆಂದು ತೀರ್ಮಾನಿಸಿದರು…

ಎಲ್ಲಾ ಪಂಚಾಯತ್ ಮಟ್ಟದಲ್ಲಿ ಶೀಘ್ರದಲ್ಲೇ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಆಗಮಿಸಿ ಕುಂದುಕೊರತೆಯ ಸಭೆ ನಡೆಸುವಂತೆ ಹಾಗೂ ಅದರ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುದಾಗಿ ಎಸಿ ಯವರು ಸಭೆಗೆ ಭರವಸೆ ನೀಡಿದರು

Related posts

Leave a Reply