Header Ads
Breaking News

ನವೀಕೃತ ಸುಚಿತ್ರಾ-ಪ್ರಭಾತ್ ಥಿಯೇಟರ್‌ಗೆ ಪ್ರಥಮ ವರ್ಷಾಚರಣೆಯ ಸಂಭ್ರಮ

ಅತ್ಯಾಧುನಿಕ ಸೌಕರ್ಯಗಳೊಂದಿಗೆ ಈಗಾಗಲೇ ಚಿತ್ರಪ್ರೇಮಿಗಳ ಮನಸ್ಸು ಗೆದ್ದ ನಗರದ ಕೆ.ಎಸ್. ರಾವ್ ರಸ್ತೆಯ ‘ಸುಚಿತ್ರ’ ಹಾಗೂ ಪ್ರಭಾತ್ ನವೀಕೃತ ಥಿಯೇಟರ್‍ಗೆ ಒಂದು ವರುಷದ ಸಂಭ್ರಮ. ಮಂಗಳೂರಿನ ಏಕೈಕ 4ಕೆ ಥಿಯೇಟರ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿರುವ ಸುಚಿತ್ರಾ-ಪ್ರಭಾತ್ ಈಗ ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡು ಸಿನಿಪ್ರೇಕ್ಷಕರ ಮನಗೆದ್ದಿದೆ.

ನಗರದಲ್ಲಿ ಪ್ರತಿಷ್ಠಿತ ಮಾಲ್‍ಗಳು ಬಂದು ಅಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್‍ಗಳ ಜಮಾನ ಸೃಷ್ಟಿಯಾದ ಬಳಿಕ ಬಹುತೇಕ ಸಿಂಗಲ್ ಥಿಯೇಟರ್‍ಗಳು ಭವಿಷ್ಯ ಕಳೆದುಕೊಳ್ಳಲಿದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ ಇದಕ್ಕೆ ಅಪವಾದವೆಂಬಂತೆ ಮಲ್ಟಿಪ್ಲೆಕ್ಸ್‍ಗಳನ್ನೂ ಮೀರಿಸುವ ರೀತಿಯಲ್ಲಿ ಬೆಳೆದುನಿಂತಿದ್ದು ಮಂಗಳೂರಿನ ನವೀಕೃತ ಸುಚಿತ್ರ ಹಾಗೂ ಪ್ರಭಾತ್ ಥಿಯೇಟರ್. ಹೌದು, ಇದೀಗ ನವೀಕರಣಗೊಂಡು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಸುಚಿತ್ರಾ ಪ್ರಭಾತ್ ಥಿಯೇಟರ್‍ಗೆ ಇದೀಗ ಒಂದು ವರ್ಷದ ಸಂಭ್ರಮ. ಮಂಗಳೂರಿನ ಮೊದಲ 4ಕೆ ಥಿಯೇಟರ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿರುವ ಸುಚಿತ್ರಾ ಪ್ರಭಾತ್, ಯಾವುದೇ ಸಿಂಗಲ್ ಥಿಯೇಟರ್‍ನಲ್ಲಿ ಇಲ್ಲದ ಹವಾನಿಯಂತ್ರಿತ ವ್ಯವಸ್ಥೆ, ಆಧುನಿಕ ಶೈಲಿಯ ಸೌಂಡ್ ಸಿಸ್ಟಂ, ಅತ್ಯಾಧುನಿಕ ತಂತ್ರಜ್ಞಾನದ ಪೆÇ್ರಜೆಕ್ಟರ್‍ನ್ನು ಹೊಂದಿದೆ.

ಇನ್ನು ನವೀಕೃತ ಸುಚಿತ್ರಾ-ಪ್ರಭಾತ್ ಥಿಯೇಟರ್‍ನ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಒಂದು ಕುತೂಹಲಕಾರಿ ಅಂಶವಿದೆ. 2018ರ ಏಪ್ರಿಲ್ 26ರಂದು ನವೀಕೃತ ಸುಚಿತ್ರಾ ಥಿಯೇಟರ್ ಲೋಕಾರ್ಪಣೆಗೊಂಡಿತ್ತು. ಆ ಸಂದರ್ಭದಲ್ಲಿ ‘ಅವೆಂಜರ್ಸ್ ಇನ್ಫಿನಿಟಿ ವಾರ್’ ಮೂವಿ ರಿಲೀಸ್ ಆಗಿತ್ತು. ಇದೀಗ ಒಂದು ವರ್ಷದ ವಾರ್ಷಿಕೋತ್ಸವದ ಸಂದರ್ಬದಲ್ಲೂ ಆವೆಂಜರ್ಸ್ ಸಿರೀಸ್‍ನ ಸಿನೆಮಾ ಬಿಡುಗಡೆಯಾಗ್ತಾ ಇದೆ. ಈ ಬಾರಿ ‘ಆವೆಂಜರ್ಸ್ ಎಂಡ್‍ಗೇಮ್’ ಸಿನೆಮಾ ರಿಲೀಸ್ ಆಗ್ತಾ ಇದೆ. ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಚಿತ್ರಮಂದಿರ ಮುಂಭಾಗದಲ್ಲಿ ಫಸ್ಟ್ ಟೈಮ್ 36 ಎತ್ತರ ಬೃಹತ್‍ಕಾರ ಫ್ಲೈಕ್ಸ್ ಅಳವಡಿಸಲಾಗಿದ್ದು, ಇದು ಸಿನಿಪ್ರೇಕ್ಷಕರನ್ನು ಗಮನಸೆಳೆದಿದೆ.

ಅತ್ಯಾಧುನಿಕ ಸೌಕರ್ಯಗಳೊಂದಿಗೆ ಈಗಾಗಲೇ ಚಿತ್ರಪ್ರೇಮಿಗಳ ಮನಸ್ಸು ಗೆದ್ದ ನಗರದ ಕೆ.ಎಸ್. ರಾವ್ ರಸ್ತೆಯ ‘ಸುಚಿತ್ರ’ ಹಾಗೂ ಪ್ರಭಾತ್ ಥಿಯೇಟರ್‍ನಲ್ಲಿ ಸಿನಿಪ್ರಿಯರಿಗಾಗಿ ಸಾಕಷ್ಟು ಕೊಡುಗೆಗಳ ಮೂಲಕ ಗಮನಸೆಳೆಯುತ್ತಿದೆ. ಬುಕ್‍ಮೈ ಶೋದಲ್ಲಿ ಕೂಡ ಸಿನೆಮಾ ಪ್ರೇಕ್ಷಕರು ಟಿಕೆಟ್ ಕಾಯ್ದಿರಿಸುವ ಅವಕಾಶವಿದೆ. ಈಗಾಗಲೇ ಕರಾವಳಿಯಲ್ಲಿ ಅತ್ಯುತ್ತಮ ಥಿಯೇಟರ್ ಎಂಬ ಹೆಗ್ಗಳಿಕೆಯನ್ನ ಪಡೆದುಕೊಂಡಿರುವ ಸುಚಿತ್ರ ಹಾಗೂ ಪ್ರಭಾತ್ ಥಿಯೇಟರ್‍ನ ಮೊದಲ ವರ್ಷಾಚರಣೆಯ ಸಂಭ್ರಮಕ್ಕೆ ಸಿದ್ಧವಾಗಿದೆ.

Related posts

Leave a Reply

Your email address will not be published. Required fields are marked *