Header Ads
Header Ads
Header Ads
Breaking News

ನವೆಂಬರ್‌ನಲ್ಲಿ ನಡೆಯಲಿರುವ ಧರ್ಮಸಂಸದ್ ಕಾರ್ಯಕ್ರಮ  ಉಡುಪಿಯಲ್ಲಿ ಆಮಂತ್ರಣ ಪತ್ರಿಕೆ ಬ್ಯಾನರ್ , ಪೋಸ್ಟರ್ ಬಿಡುಗಡೆ  ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಬಿಡುಗಡೆ 

ವಿಶ್ವ ಹಿಂದು ಪರಿಷತ್‌ನ ಆಯೋಜನೆಯಲ್ಲಿ ನವೆಂಬರ್‌ನಲ್ಲಿ ನಡೆಯುವ ಧರ್ಮ ಸಂಸದ್ ಕಾರ್ಯಕ್ರಮದ ಪ್ರಚಾರಕ್ಕಾಗಿ ಆಮಂತ್ರಣ ಪತ್ರಿಕೆ ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಉಡುಪಿಯ ಧರ್ಮ ಸಂಸದ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಕಳ ಶಾಸಕ ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಬಿಡುಗಡೆ ಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು ಧರ್ಮದ ಕೆಲಸ ಮಾಡಲು ಉಡುಪಿ ಜಿಲ್ಲೆಯ ಜನರಿಗೆ ಮತ್ತೊಂದು ಸುವರ್ಣ ಅವಕಾಶ ಲಭಿಸಿದೆ. ಜಾತಿ ಮತಗಳ ವಿಚಾರದಲ್ಲಿ ಹಿಂದು ಧರ್ಮವನ್ನು ಒಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಧರ್ಮವನ್ನು ಮತ್ತೇ ಒಂದುಗೂಡಿಸುವ ಕೆಲಸ ವಿಶ್ವ ಹಿಂದು ಪರಿಷತ್‌ನಲ್ಲಿ ನಡೆಯುತ್ತಿದೆ ಎಂದು ಅವ್ರು ಹೇಳಿದ್ರು.


ದಿಯಾ ಸಿಸ್ಟಮ್ಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ರವಿಚಂದ್ರ ಅಧ್ಯಕ್ಷತೆ ವಹಿಸಿದ್ದು. ವಿಶ್ವ ಹಿಂದು ಪರಿಷತ್‌ನ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ ಪುರಾಣಿಕ್, ಉಡುಪಿ ಜಿಲ್ಲಾಧ್ಯಕ್ಷ ಪಿ ವಿಲಾಸ್ ನಾಯಕ್, ಭಜರಂಗ ದಳದ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್, ವಿಭಾಗ ಸಂಚಾಲಕ ಸುನಿಲ್ ಕೆ.ಆರ್ ಜಿಲ್ಲಾ ಸಂಚಾಲಕ ದಿನೇಶ್ ಭಂಡನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply