Header Ads
Header Ads
Header Ads
Breaking News

ನವೆಂಬರ್ ಒಳಗೆ ಸೋಡಿಯಂ ಮುಕ್ತ ಉಡುಪಿ ಜಿಲ್ಲೆ -ಮೀನಾಕ್ಷಿ ಮಾಧವ

ಮುಂದಿನ ನವೆಂಬರ್ ತಿಂಗಳ ಒಳಗಾಗಿ ಉಡುಪಿ ಜಿಲ್ಲೆ ಸೋಡಿಯಂ ದೀಪ ಮುಕ್ತ ಜಿಲ್ಲೆಯಾಗಲಿದೆ. ಈ ಬಗ್ಗೆ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಮಾಹಿತಿ ನೀಡಿದರು.
ನಗರಸಭೆಯು ಮೊದಲ ಹಂತದ ಸೋಡಿಯಂ ಲ್ಯಾಂಪ್ ಬದಲಾವಣೆಯ ಪ್ರಕ್ರೀಯೆಯನ್ನು ಕಳೆದ ವರ್ಷ ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದೆ.ನಗರದ ಒಟ್ಟು 15,938 ಬೀದಿ ದೀಪಗಳಲ್ಲಿ 1,773  ಸೋಡಿಯಂ ದೀಪಗಳಾಗಿವೆ. ಸುಮಾರು 1,144 ದೀಪಗಳನ್ನು ಎಲ್.ಇ.ಡಿ ದೀಪಗಳಿಗೆ ಬದಲಾಯಿಸಲಾಗಿದೆ. ಇದರಿಂದ ತಿಂಗಳು ನಗರಸಭೆಗೆ ನಾಲ್ಕು ಲಕ್ಷ ವಿದ್ಯುತ್ ಬಿಲ್ ಉಳಿತಾಯವಾಗುತ್ತಿದೆ.ಇದುವರೆಗೆ ನಗರಸಭೆ ಒಟ್ಟು ರೂ.53.21 ಲಕ್ಷಕ್ಕೂ ಅಧಿಕ ಮೊತ್ತವನ್ನು ಉಳಿಸಿದೆ.ಸೋಡಿಯಂ ದೀಪದಿಂದ ಎಲ್.ಇ.ಡಿ ಗೆ ಬದಲಾವಣೆ ಮಾಡಿರುವುದರಿಂದ 9 ಲಕ್ಷಕ್ಕೂ ಅಧಿಕ ಯುನಿಟ್ ವಿದ್ಯುತ್ ಉಳಿತಾಯವಾಗುತ್ತಿದೆ ಎಂದು ವಿವರಿಸಿದರು.ಕೇವಲ 229 ಸೋಡಿಯಂ ದೀಪಗಳ ಬದಲಾವಣೆ ಮಾತ್ರ ಬಾಕಿ ಇದೆ. ಅದು ಕೂಡಾ ನವೆಂಬರ್ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ. ಈಗಾಗಲೇ 400 ಎಲ್.ಇ.ಡಿ ಬಲ್ಬುಗಳ ಬದಲಾವಣೆಗೆ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply