Header Ads
Header Ads
Header Ads
Breaking News

ನವೆಂಬರ್ ತಿಂಗಳಲ್ಲಿ ನಡೆಯಲಿರುವ ಧರ್ಮ ಸಂಸದ್ ವೆಬ್‌ಸೈಟ್ ಉದ್ಘಾಟಿಸಿದ ಗಣೇಶ್ ರಾವ್ ಧರ್ಮ ಸಂಸದ್‌ನಲ್ಲಿ ಭಾಗವಹಿಸುವುದು ನಮ್ಮ ಸೌಭಾಗ್ಯ ಮಾಹಿತಿಯನ್ನು ನೀಡಲು ವೆಬ್‌ಸೈಟ್ ಅನುಕೂಲಕರ

ನವೆಂಬರ್ ತಿಂಗಳಲ್ಲಿ ನಡೆಯಲಿರುವ ಧರ್ಮ ಸಂಸದ್ ವ್ಯಾಪಕ ಪ್ರಚಾರಕ್ಕಾಗಿ ಹಾಗೂ ಭಾಗವಹಿಸುವ ಸಾಧು ಸಂತರ ಅನುಕೂಲಕ್ಕಾಗಿ ಧರ್ಮ ಸಂಸದ್ ವೆಬ್‌ಸೈಟ್‌ನ್ನು ಉದ್ಘಾಟಿಸಲಾಯಿತು. ಕರವಾಳಿ ಕಾಲೇಜು ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ಧರ್ಮ ಸಂಸದ್‌ನಲ್ಲಿ ಭಾಗವಹಿಸುವ ಸಾಧು ಸಂತರಿಗೆ ಗಣ್ಯರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಇಚ್ಚಿಸುವವರು ಈ ವೆಬ್‌ಸೈಟ್ ಮೂಲಕ ಮಾಹಿತಿಯನ್ನು ನೀಡಬಹುದು. ವೆಬ್‌ಸೈಟ್‌ನ್ನು ಉದ್ಘಾಟಿಸಿ ಮಾತನಾಡಿದ ಗಣೇಶ್ ರಾವ್ ಪರಿಯಾಯ ಶ್ರೀಗಳ ಐದನೇಯ ಪರಿಯಾಯದಲ್ಲಿ ನಾವು ಭಾಗಿಯಾಗಿರುವುದೆ ನಮ್ಮ ಸೌಭಾಗ್ಯ ಅದರಲ್ಲೂ ಅವರ ಇಚ್ಚೆಯಂತೆ ಧರ್ಮ ಸಂಸದ್‌ನಲ್ಲಿ ಭಾಗವಹಿಸುದೇ ನಮ್ಮ ಸೌಭಾಗ್ಯವಾಗಿದೆ. ವಿದೇಶದಲ್ಲಿ ಇರುವ ಹಿಂದೂಗಳು ಈ ಒಂದು ಸಮಾವೇಶದಲ್ಲಿ ಭಾಗಿಗಳಲಾಗಲು ಅವರಿಗೆ ಮಾಹಿತಿಯನ್ನು ನೀಡಲು ಈ ವೆಬ್‌ಸೈಟ್ ಅನುಕೂಲವಾಗಲಿದೆ.

ಎಲ್ಲಾ ಹಿಂದೂಗಳು ಈ ಒಂದು ವಹತ್ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ತಂತ್ರಿಕ ಯುಗದಲ್ಲಿ ಹೆಚ್ಚಾಗಿ ಜನ ತಂತ್ರಜ್ಞಾನಕ್ಕೆ ಮಾರು ಹೋಗಿದ್ದಾರೆ. ಆದ್ದರಿಂದ ವೆಬ್‌ಸೈಟ್‌ಯನ್ನು ಪ್ರಾರಂಭಿಸಿರುದರಿಂದ ಪ್ರಪಂಚದ ಮೂಲೆ ಮೂಲೆಯಲ್ಲಿ ಇರುವ ಹಿಂದೂಗಳನ್ನು ಸಂಪರ್ಕಿಸಬಹುದು. ಕರವಾಳಿ ಜಿಲ್ಲೆಗಳಲ್ಲಿ ಪಿ‌ಎಫ್‌ಐ, ಸಿಮಿ ಅಂತಹ ಭಯೋತ್ಪದಾನ ಸಂಘಟನಗಳ ಜೊತೆಗೆ ಐಸಿಸ್ ಕೂಡ ಕರವಾಳಿಯಲ್ಲಿ ನೆಲೆಯಾಗಿದೆ ಎಂಬುವ ಅದು ನಮ್ಮ ದುರಾದೃಷ್ಟಕರ .ಇಂತಹ ದುಷ್ಟ ಶಕ್ತಿಗಳನ್ನು ಧಮನಿಸಲು ಹಿಂದೂ ಸಮಾಜ ಸಧೃಡವಾಗಬೇಕಾಗಿದೆ. ಈ ಕಾರ್ಯಕ್ರಮದ ಜಾವಬ್ದಾರಿ ಕೇವಲ ವಿಶ್ವ ಹಿಂದೂ ಪರಿಷದ್ ಇದ್ದು ಮಾತ್ರವಲ್ಲ. ಎಲ್ಲಾ ಹಿಂದೂಗಳ ಜವಾಬ್ದಾರಿಯಾಗಿದೆ ಎಂದರು.

ವರದಿ: ಪಲ್ಲವಿ ಸಂತೋಷ್

Related posts

Leave a Reply