Header Ads
Breaking News

ನವೆಂಬರ್ ತಿಂಗಳಲ್ಲಿ ವಿಸ್ಮಯ ಕ್ರಿಯೇಷನ್ಸ್ ಅರ್ಪಿಸುವ ಆಂಗಿಕಂ ಚಿತ್ರ ತೆರೆಗೆ

ಕಾಡಿನ ಮಧ್ಯೆ ಅಂಧ ಬಾಲಕ ತನ್ನ ಹೆತ್ತವರ ನಿಧನದ ನಂತರ ತನ್ನ ಸಹೋದದರೊಂದಿಗೆ ಜೀವವನ್ನು ಮುನ್ನಡೆಸುವ ನೈಜ ಘಟನೆಗಳನ್ನು ಆಧರಿಸಿದ ಚಿತ್ರ ’ಆಂಗಿಕಂ’ಚಿತ್ರವು ನವೆಂಬರ್‌ನಲ್ಲಿ ತೆರೆಕಾಣಲಿದೆ.ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ಮಜಾಭಾರತ ಖ್ಯಾತಿಯ ಚಂದ್ರಪ್ರಭಾ ಜಿ. ಅವರು, ಚಿತ್ರದ ಚಿತ್ರೀಕರಣವು ಧರ್ಮಸ್ಥಳ, ಮಂಗಳೂರು, ಕೋಲಾರ, ಮಮಡ್ಯ ಸುತ್ತಮುತ್ತ ನಡೆಯುತ್ತಿದೆ ಎಂದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಾಮಾಜಿಕ ಕಳಕಳಿಯ ಚಿತ್ರಕಥೆಯಿಂದ ಕೂಡಿದೆ. ಚಿತ್ರದಲ್ಲಿ ಮಜಾಭಾರತ್ ಕಾಮಿಡಿ ಶೋ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.
ಆನಂತರ ಚಿತ್ರದ ನಿರ್ಮಾಪಕ ಹಾಲತಿ ಲೋಕೇಶ್ ಅವರು ಮಾತನಾಡಿ, ವಿಭಿನ್ನವಾದ ಮತ್ತು ನೈಜ ಘಟನೆ ಆಧಾರಿತ ಚಿತ್ರವನ್ನು ನಿರ್ಮಿಸಿದ್ದು, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರ ಇದಾಗಿದೆ ಎಂದರು.ಆನಂತರ ಕಲಾವಿದೆ ಆರಾಧನಾ ಭಟ್ ಮಾತನಾಡಿ, ಸಾಮಾಜಿಕ ಕಳಕಳಿಯ ಚಿತ್ರವೊಂದು ನೈಜ ಅಂಧ ಕಲಾವಿದರ ಜತೆ ನಟಿಸಲಿ ಅವಕಾಶ ಕಲ್ಪಿಸಿದೆ ಎಂದರು.
ಈ ಸಂದರ್ಭ ಚಿತ್ರದ ಸಹ ನಿರ್ದೇಶಕ ನಿಂಗರಾಜು, ಬಾಲ ನಟ ಅತಿಶ್ ಶೆಟ್ಟಿ, ಪ್ರವೀಣ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *