Header Ads
Header Ads
Breaking News

ನವೆಂಬರ್ 12ರಂದು ಮನಪಾ ಚುನಾವಣೆ ಹಿನ್ನೆಲೆ :ಪಕ್ಷೇತರ ಅಭ್ಯರ್ಥಿಯಾಗಿ ವಿಶ್ವನಾಥ್ ಕಣಕ್ಕೆ

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯು ನವೆಂಬರ್ 12ರಂದು ನಡೆಯಲಿದ್ದು, ವಾರ್ಡ್ ನಂ. 49ರ ಕಂಕನಾಡಿ ಬಿ ಗ್ರಾಮದ ವಿ ವಿಶ್ವನಾಥ್‌ರವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಅವರು ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಈ ಹಿಂದೆ ಇದೇ ವಾರ್ಡಿನಲ್ಲಿ ಎರಡು ಬಾರಿ ಕಾರ್ಪೋರೇಟರ್ ಆಗಿ ಅಧಿಕಾರ ವಹಿಸಿದ್ದು, ಪ್ರತಿಯೊಂದು ವಾರ್ಡಿನ ಜನರ ಸೇವೆಯನ್ನು ಮಾಡ್ತಾ ಬಂದಿದ್ದೇನೆ ಎಂದು ಹೇಳಿದ್ರು. ಇನ್ನು 44 ವರ್ಷಗಳಿಂದ ಉಚಿತ ಶಿಕ್ಷಣ ತರಗತಿಯ ಮೂಲಕ ವಿದ್ಯಾದಾನದ ಮಹಾತ್ಕಾರ್ಯವನ್ನು ನಡೆಸಿಕೊಂಡು ಬಂದಿದ್ದು, ಉಚಿತ ಪುಸ್ತಕ ವಿತರಣೆ ವಿದ್ಯಾರ್ಥಿ ವೇತನ, ವೈದ್ಯಕೀಯ ಶಿಬಿರ, ಪ್ರವಾಸ ಕಾರ್ಯಕ್ರಮ, ಸಾರ್ವಜನಿಕ ಗಣೇಶೋತ್ಸವ, ಸೇವಾದಳ ವಾರ್ಷಿಕೋತ್ಸವವನ್ನು ಜರಗಿಸಿಕೊಂಡು ಬಂದಿದ್ದು, ವಾಲಿಬಾಲ್ ಪಂದ್ಯಾಟ, ಆಟೋಟ ಸ್ಪರ್ಧೆ, ಸಂಗೀತ, ಚಿತ್ರಕಲಾ ಸ್ಪರ್ಧೆಗಳನ್ನು ಜರಗಿಸಿಕೊಂಡು ಬಂದಿದ್ದೇನೆ ಅಂತ ಹೇಳಿದ್ರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಪಕ್ಷೇತರ ಕಾರ್ಯಕರ್ತರಾದ ಅಬ್ದುಲ್ ಸತ್ತರ್, ರತ್ನಾಕರ್ ರಾವ್, ಗಂಗಾಧರ್ ಸತ್ತಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *