Header Ads
Header Ads
Breaking News

ನವೆಂಬರ್ 18ರಂದು ಉಪ್ಪಳ ಕ್ಯಾನ್ಸರ್ ಕೇರ್ ಫೌಂಡೇಷನ್ ಉದ್ಘಾಟನೆ

ಮಂಜೇಶ್ವರ: ಕಾಸರಗೋಡು ಜಿಲ್ಲೆಯಲ್ಲಿ ಸಂಕಷ್ಟವನ್ನು ಅನುಭವಿಸುತ್ತಿರುವ ಬಡ ಕುಟುಂಬಗಳಲ್ಲಿರುವ ರೋಗಿಗಳಿಗೆ ಸಹಾಯವನ್ನು ಒದಗಿಸಲು ಮತ್ತು ರೋಗಿಗಳಿಗೆ ಆರೋಗ್ಯಕರವಾದಂತಹ ಮಾರ್ಗದರ್ಶನಗಳನ್ನು ನೀಡಿ ಉತ್ತಮವಾದ ವೈದ್ಯರನ್ನು ಹಾಗೂ ಔಷಧಿಗಳನ್ನು ನೀಡುವ ಉದ್ದೇಶದಿಂದ ಉಪ್ಪಳ ಕ್ಯಾನ್ಸರ್ ಪೌಂಡೇಶನ್ ಆರಂಭಿಸುತ್ತಿರುವುದಾಗಿ ಪೌಂಡೇಶನ್‌ನ ಪದಾಧಿಕಾರಿಯಾದ ತಂಬಾನ್ ನಾಯರ್ ತಿಳಿಸಿದರು.

ಇತ್ತೀಚೆಗೆ ನಿಧನರಾದ ಮಂಜೇಶ್ವರದ ಶಾಸಕ ಪಿ. ಬಿ ಅಬ್ದುಲ್ ರಜಾಕ್ ಸ್ಮರಣಾರ್ಥ ಆರಂಭಿಸಲಾಗುತ್ತಿರುವ ಈ ಕೇಂದ್ರ ಬಾನುವಾರದಂದು ಮಧ್ಯಾಹ್ನ ೨ ಗಂಟೆಗೆ ಕಾಸರಗೋಡು ಶಾಸಕ ಎನ್‌ಎ. ನೆಲ್ಲಿಕುನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಫೌಂಡೇಶನ್ ಅಧ್ಯಕ್ಷ ಹಿಂದುಸ್ಥಾನ್ ಮೋನು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಂಗಳೂರು ಕ್ಯಾನ್ಸರ್ ರೋಗದ ಖ್ಯಾತ ತಜ್ಞ ಡಾ.ಕೃಷ್ಣ ಪ್ರಸಾದ್ , ಮಲಬಾರ್ ಕ್ಯಾನ್ಸರ್ ಓಕೋಲಾಜಿ ವಿಭಾಗದ ಖ್ಯಾತ ತಜ್ಞ ಚಂದ್ರನ್ ಕೆ ನಾಯರ್ ಮುಖ್ಯ ಅತಿಥಿಗಳಾಗಿರುವರು.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಫೌಂಡೇಶನ್ ಅಧ್ಯಕ್ಷ ಹಿಂದುಸ್ಥಾನ್ ಮೋನು ಹಾಜಿ, ಕಾರ್ಯದರ್ಶಿ ಸಾದಿಖ್ ಕೈಕಂಬ, ರೈಶಾದ್ ಉಪ್ಪಳ, ಮಹ್ಮೂದ್ ಕೈಕಂಬ, ಮಜೀದ್ ಪಚ್ಚಂಬಳ ಉಪಸ್ಥಿತರಿದ್ದರು.

 

 

 

Related posts

Leave a Reply