Header Ads
Header Ads
Breaking News

ನವೆಂಬರ್ 30, ಡಿಸೆಂಬರ್ 1,2ರಂದು “ಸೂರಜ್ ಕಲಾಸಿರಿ-2018”

ಮುಡಿಪು-ಸೂರಜ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರಾವಳಿಯ ಕಲಾವೈಭವ ಸೂರಜ್ ಕಲಾಸಿರಿ-2018ನವೆಂಬರ್ 30,ಡಿಸೆಂಬರ್1 ಮತ್ತು 1 ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಅನಾವರಣಗೊಳ್ಳಲಿದೆ. ಎಂದು ಸೂರಜ್ ಶಿಕ್ಷಣೆ ಸಂಸ್ಥೆಯ ಅಧ್ಯಕ್ಷ ರೊಟೇರಿಯನ್ ಪಿ.ಎಚ್.ಎಫ್.ಡಾ.ಮಂಜುನಾಥ್ ಎಸ್ ರೇವಣ್ಕರ್ ಹೇಳಿದರು.

ಇವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಕರಾವಳಿಯ ಕಲಾವೈಭವ ಸೂರಜ್ ಕಲಾಸಿರಿ-2018ರ ಮೂರು ದಿನಗಳ ಕಾರ್ಯಕ್ರದಲ್ಲಿ ಮೂರು ಜಿಲ್ಲೆಗಳ ಕಲಾವಿದರ ಸಮ್ಮಿಲನವಾಗಲಿದೆ ಈ ಬಾರಿಯ ಅತ್ಯುನ್ನತ ಸೂರಜ್ ಕಲಾಸಿರಿ ಪ್ರಶಸ್ತಿಯನ್ನು ಖ್ಯಾತ ಚಲನಚಿತ್ರ ನಟಿ ಪದ್ಮಶ್ರೀ ಭಾರತಿ ವಿಷ್ಣುವರ್ಧನ್‌ರವರಿಗೆ ನೀಡಲಿದ್ದೇವೆ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ ಮುಖ್ಯವಾಗಿ ಮೊದಲ ದಿನ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ’ಯಕ್ಷಗಾನ ನಾಟ್ಯವೈಭವ’, ನಾಟ್ಯ ನಿಕೇತನ ಕೊಲ್ಯ ಇವರಿಂದ ’ಭರತನಾಟ್ಯ’, ನೃತ್ಯ ಗುರುಗಳದ ಉಳ್ಳಾಲ್ ಮೋಹನ್‌ಕುಮಾರ್ ಹಾಗೂ ರಾಜೇಶ್ ಶೇಣೈ ಬಳಗದವರಿಂದ ’ನೃತ್ಯ ಮೋಹನಂ’, ಮೈಮ್ ರಾಮದಾಸ್ ಮತ್ತು ಬಳಗದವರಿಂದ ತುಳು ಮತ್ತು ಕನ್ನಡ ’ಸುಗಮ ಸಂಗೀತ’ ಎರಡನೆಯ ದಿನ ಜನಪದ ಕುಣಿತಗಳು ಮೂರನೆ ದಿನ ವಿ4 ನ್ಯೂಸ್ ಪ್ರಸ್ತುತ ಪಡಿಸುವ ಕಾಮಿಡಿ ರಿಯಾಲಿಟಿ ಶೋ ’ಕಾಮಿಡಿ ಪ್ರೀಮಿಯರ್ ಲೀಗ್’ ತುಳು ಹಾಸ್ಯ ಕಾರ್ಯಕ್ರಮ ಮತ್ತು ಕುದ್ರೋಳಿ ಗಣೇಶ್‌ರವರಿಂದ ’ಜಾದೂ ಪ್ರದರ್ಶನ’ ನಡೆಯಲಿದೆ ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಸೂರಜ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಹೇಮಲತಾ ಎಂ.ರೇವಣ್ಕರ್, ಮುಖ್ಯೋಪಾಧ್ಯಾಯಿನಿ ಮಿಮಲಾ ಶೆಟ್ಟಿ, ನಿರ್ಧೆಶಕ ಸೂರಜ್ ಎಂ.ರೇವಣ್ಕರ್, ಸಲಹಾ ಸಮಿತಿ ಸದಸ್ಯ ಡಾ.ದೇವರಾಜ್ ಉಪಸ್ಥಿತರಿದ್ದರು.

Related posts

Leave a Reply