Header Ads
Header Ads
Breaking News

ನವ ಜೀವನಕ್ಕೆ ಕಾಲಿರಿಸಿದ ಭಾರತ ಹಾಕಿ ತಂಡದ ಉಪನಾಯಕ ಸುನಿಲ್

ಭಾರತದ ಹಾಕಿ ತಂಡದ ಆಟಗಾರ, ಒಲಿಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತ ಕೊಡಗಿನ ಎಸ್.ವಿ. ಸುನಿಲ್ ಅವರು ಮಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಸುನೀಲ್, ಮಂಗಳೂರು ಮೂಲದ ನಿಶಾರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಿಶಾ ಕೊಂಚಾಡಿ ಗ್ರಾಮದ ತಾರನಾಥ-ಸುನಿತಾ ದಂಪತಿಯ ಪುತ್ರಿಯಾಗಿದ್ದು, ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.
ವಿಶ್ವಕರ್ಮ ಸಮುದಾಯದ ಪದ್ಧತಿಯಂತೆ ಮದುವೆ ಕಾರ್ಯಕ್ರಮ ನಡೆದಿದ್ದು, ಸೀಮಿತ ಸಂಖ್ಯೆಯಲ್ಲಿ ಬಂಧು-ಮಿತ್ರರು, ಸ್ನೇಹಿತರು ಹಾಗೂ ಹಾಕಿ ತಂಡದ ಐವರು ಮಿತ್ರರು ಪಾಲ್ಗೊಂಡಿದ್ದರು. ಸೋಮವಾರ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಆರತಕ್ಷತೆ ನಡೆಯಲಿದ್ದು, ಸ್ನೇಹಿತರು, ಭಾರತ ಹಾಕಿ ತಂಡದ ಆಟಗಾರರು, ಮಾಜಿ ಆಟಗಾರರಾದ ಅರ್ಜುನ್ ಹಾಲಪ್ಪ, ಧನರಾಜ್ ಪಿಳೈ, ಎ.ಬಿ.ಸುಬ್ಬಯ್ಯ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ವರದಿ: ನಾಗರಾಜ್ ಮಂಗಳೂರು

Related posts

Leave a Reply