Header Ads
Header Ads
Breaking News

ನಾಗರಿಕ ಸಮಿತಿಯಿಂದ ಉಡುಪಿಯಲ್ಲಿ ವಿಜಯೋತ್ಸವದ ಸಂಭ್ರಮ

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇವರು, ಭಾರತದ ವಾಯುಸೇನೆಯು ಪಾಕಿಸ್ಥಾನದ ಉಗ್ರವಾದಿಗಳನ್ನು ನಾಶಗೊಳಿಸಿದ ಪ್ರಯುಕ್ತ “ವಿಜಯೋತ್ಸವ ಸಂಭ್ರಮ” ವಿಶಿಷ್ಟ ಕಾರ್ಯಕ್ರಮವನ್ನು ಚಿತ್ತರಂಜನ್ ಸರ್ಕಲ್ ಬಳಿಯ ಸಮಿತಿಯ ಜನ ಸಂಪರ್ಕ ಕಛೇರಿ ವಠಾರದಲ್ಲಿ ನಡೆಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ 20 ಅಡಿ ಉದ್ದ, 14 ಅಡಿ ಅಗಲದ ತ್ರಿವರ್ಣ ಧ್ವಜ ಪ್ರದರ್ಶಿಸಿ ಸಾಮೂಹಿಕವಾಗಿ ಭಾರತ್ ಮಾತ ಕೀ ಜೈ ಎಂದು ಜಯಘೋಷ ಕೂಗಲಾಯಿತು. ಸಾರ್ವಜನಿಕರಿಗೆ ಸ್ಥಳದಲ್ಲಿಯೇ 3 ಸಾವಿರ ಬಿಸಿ ಬಿಸಿ ಜಿಲೇಬಿ ತಯಾರಿಸಿ ವಿತರಿಸಲಾಯಿತು. ಕೃಷ್ಣ ಕ್ಯಾಟ್ರಸ್ ಮಾಲಿಕರಾದ ಶ್ರೀಧರ್ ಭಟ್ ಉಚ್ಚಿಲ ಅವರ ಬಾಣಸಿಗರ ತಂಡದಿಂದ ಜಿಲೇಬಿ ತಯಾರಿಕೆ ನಡೆಯಿತು.

ಕಾರ್ಯಕ್ರಮದಲ್ಲಿ ಯೋಧ ಸುಭ್ರಮಣ್ಯ ಉಪಧ್ಯಾಯ, ಮಾಜಿ ಯೋಧರಾದ ರಘುಪತಿ ರಾವ್, ಗಣೇಶ್ ರಾವ್, ಸಾಧು ಕುಂದರ್, ಕೃಷ್ಣ ಆಚಾರ್ಯ, ರಮೇಶ್ ಭಂಡಾರಿ, ನವೀನ್ ಕುಮಾರ್, ನಾರಾಯಣ ಭಂಡಾರಿ ಕಪ್ಪೆಟ್ಟು, ಹರಿಣಾಕ್ಷ ಶೆಟ್ಟಿ, ವಿಲ್ಸನ್ ಕರ್ಕೆರ, ಹಾಗೂ ನಿವೃತ್ತ ಪೆÇಲೀಸ್ ಅಧಿಕಾರಿಗಳಾದ ಎನ್ ಚಂದ್ರಶೇಖರ್, ರಾಮಕೃಷ್ಣ, ರಾಮರಾವ್, ರೋಜಾರಿಯೊ ಡಿ ಸೋಜ, ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ಸುಧಾಕರ, ಡೇವಿಡ್, ಮಹಮದ್, ಬಾಲಗಂಗಾಧರ ರಾವ್ ಮತ್ತು ಸಾಮಾಜಿಕ ಕಾರ್ಯಕರ್ತ ಗಣೇಶ್ ನಾಯಕ್, ರಾಘವೇಂದ್ರ ಪ್ರಭು ಕರ್ವಾಲು, ಜೆಸಿಐ ಜಗದೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *