Header Ads
Header Ads
Breaking News

ನಾಗರೀಕ ಸಮಿತಿಯಿಂದ ಹಳೆ ಬಟ್ಟೆಗಳಿಗೆ ಮರುಜೀವ 

ಉಡುಪಿ ಜಿಲ್ಲಾ ನಾಗರೀಕ ಸಮಿತಿಯಿಂದ ಹಳೆ ಬಟ್ಟೆಗಳಿಗೆ ಮರು ಜೀವ ನೀಡುವ ನಾಲ್ಕನೇ ಹಂತದ ಕಾರ್ಯಕ್ರಮವು ಉಡುಪಿ ಸಿಟಿ ಬಸ್ ನಿಲ್ಧಾಣದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ಬಟ್ಟೆಗಳನ್ನು ವಿತರಿಸಿದರು. ನೂರಾರು ಕಾರ್ಮಿಕರು ತಮಗೆ ಬೇಕಾದ ಬಟ್ಟೆಗಳನ್ನು ಆಯ್ದುಕೊಂಡರು.


ಬಟ್ಟೆ ಅಂಗಡಿಗಳಲ್ಲಿ ಹಳೆ ದಾಸ್ತಾನುಗಳಾಗಿಉಳಿದ ಬಟ್ಟೆಗಳನ್ನು ಅಂಗಡಿ ಮಾಲಿಕರು ಸಮಿತಿಯವರ ಯೋಜನೆಗೆ ದಾನವಾಗಿ ನೀಡಿದ್ದರು. ಹಳೆ ಬಟ್ಟೆಗಳನ್ನು ಹೊಳೆಗಳಿಗೆ ಎಸೆಯ ಬೇಡಿ, ಸಾರ್ವಜನಿಕ ಸ್ಥಳಗಳಲ್ಲಿ ಸುಡಬೇಡಿ, ನಿಮ್ಮಲ್ಲಿರು ಉತ್ತಮ ಗುಣಮಟ್ಟದ ಬಟ್ಟೆಗಳನ್ನು ನಮಗೆ ನೀಡಿ, ಅದನ್ನು ನಾವು ಅವಶ್ಯಕತೆ ಇದ್ದವರಿಗೆ ವಿತರಿಸುವ ಕಾರ್ಯವನ್ನು ಮಾಡುತ್ತೆವೆಂದು ನಾಗರಿಗ ಸಮಿತಿಯವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯನ್ನು ನೀಡಿದ್ದರು.

ಪ್ರಕಟಣೆಗೆ ಸ್ಪಂದಿಸಿದ ನಗರದ ನಿವಾಸಿಗಳು ಬಟ್ಟೆಗಳ ಶುಚಿಗೊಳಿಸಿ ಇಸ್ತ್ರಿ ಹಾಕಿ ಅಚ್ಚುಕಟ್ಟಾಗಿ ಸಮಿತಿಯ ಕಛೇರಿಗೆ ತಂದು ಒಪ್ಪಿಸಿದ್ದಾರೆ. ಹೀಗೆ ಸಾರ್ವಜನಿಕರಿಂದ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಸಂಗ್ರಹಗೊಂಡು ದಾಸ್ತನಾದ ಬಳಿಕ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಸಿಟಿ ಬಸ್ ನಿಲ್ಧಾಣದ ಬಳಿ ಕಾರ್ಯಕ್ರಮ ಆಯೊಜಿಸಿ ವಿತರಣೆ ಮಾಡಿದ್ದಾರೆ.ಸುಮಾರು 300 ಅಧಿಕ ಬಟ್ಟೆಗಳನ್ನು ಕಾರ್ಮಿಕರು ಆಯ್ದು ತೆಗೆದುಕೊಂಡು ಹೋಗಿದ್ದಾರೆ.ಈ ಕಾರ್ಯಕ್ರಮಕ್ಕೆ ನಾಗರೀಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ವರದಿ: ಪಲ್ಲವಿ ಸಂತೋಷ್ ಉಡುಪಿ

Related posts

Leave a Reply

Your email address will not be published. Required fields are marked *