Header Ads
Header Ads
Breaking News

ನಾಟ್ಯದ ಮೂಲಕ ಪ್ರಕೃತಿ ಉಪಾಸನೆ ಕಾರ್ಯಕ್ರಮ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಗಿಡಗಳನ್ನು ನೆಡಲಾಯಿತು

ಮಂತ್ರ ನಾಟ್ಯಕಲಾ ಗುರುಕುಲ ಉಳ್ಳಾಲ ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ವೃಕ್ಷ ’ನಾಟ್ಯದ ಮೂಲಕ ಪ್ರಕೃತಿ ಉಪಾಸನೆ ಕಾರ್ಯಕ್ರಮಕ್ಕೆ ಚಂದ್ರಹಾಸ್ ಉಳ್ಳಾಲ ಚಾಲನೆ ನೀಡಿದರು.ವೃಕ್ಷ ಕಾರ್ಯಕ್ರಮದಲ್ಲಿ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ, ಮಂಗಳೂರು ವಲಯ ಅರಣ್ಯ ಅಧಿಕಾರಿ ಪಿ.ಶ್ರೀಧರ್‌ರವರು ಅರಣ್ಯ ಇಲಾಖೆಯಿಂದ ಪ್ರಸಕ್ತ ವರ್ಷದಲ್ಲಿ ೮೦ ಹಾವುಗಳನ್ನು ಹಿಡಿದ ದಾಖಲೆಯಿದ್ದು, ಇದರಲ್ಲಿ ಹಲವು ಕೇರೆ ಹಾವುಗಳನ್ನೇ ಸಿಬ್ಬಂದಿ ಹಿಡಿದಿದ್ದಾರೆ ಎಂದು ಹೇಳಿದರು.

ಉಳ್ಳಾಲ ಶ್ರೀ ಚೀರುಂಭ ಭಗವತಿ ತೀಯ ಸಮಾಜ ಸೇವಾ ಸಂಘ ಉಳ್ಳಾಲದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಪರಿಸರ ಪ್ರೇಮಿ ಆರ್ ಜೆ ರಶ್ಮಿ ಮಾತನಾಡಿ, ಸಭೆ, ಸಮಾರಂಭಗಳಲ್ಲಿ ಹೆಚ್ಚು ಗಿಡಗಳನ್ನು ವಿತರಿಸುವ ಕಾರ್ಯ ಆಗಬೇಕಿದೆ. ದಿವ್ಯಾಸ್ ಸಂಸ್ಥೆ ಬೆಂಬಲವಾಗಿ ನಿಂತಿದ್ದರಿಂದಾಗಿ ಮಣ್ಣು, ಗೋಮಯ, ಗೋಮೂತ್ರಗಳಿಂದ ರಚಿಸಿದ ಸೀಡ್ ಬಾಲ್ ಅನ್ನು ಆಶ್ರಮಕ್ಕೆ ವಿತರಿಸಿ ಅದರಲ್ಲಿ ಗಿಡ ಬೆಳೆದು ಯಶಸ್ವಿಯಾಗಿ, ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಬೆಳೆಸಿದ ಸೀಡ್ ಬಾಲ್‌ನಲ್ಲಿ ಗಿಡಗಳು ಬೆಳೆದು ಯೋಜನೆ ಯಶಸ್ವಿಯಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ್ ಉಳ್ಳಾಲ್, ಶ್ರೀ ಚೀರುಂಭ ಭಗವತಿ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಯಶವಂತ ಪಿ.ಉಚ್ಚಿಲ್, ಕಾರ್ಯದರ್ಶಿ ಬಾಬು ಬೆಳ್ಚಾಡ, ಪ್ರಧಾನ ಸಂಚಾಲಕರು ನಾಗೇಶ್ ತೊಕ್ಕೊಟ್ಟು, ಅರ್ಚಕರು ಮಂಜಪ್ಪ ಕಾರ್ನವರ್ , ಅಪ್ಪು ಆತಾರ್, ಪರಿಸರ ಹೋರಾಟ ಗಾರ, ಅಂತರಾಷ್ಟ್ರೀಯ ಕಲಾವಿದ ದಿನೇಶ್ ಹೊಳ್ಳ, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಮಂತ್ರ ನಾಟ್ಯಕಲಾ ಗುರುಕುಲದ ಅಧ್ಯಕ್ಷೆ ಶಕೀಲಾ ಜನಾರ್ದನ್ ಮುಖ್ಯ ಅತಿಥಿಗಳಾಗಿದ್ದರು.

Related posts

Leave a Reply