Header Ads
Header Ads
Breaking News

ನಾಣ್ಯ ಶ್ರೀನಾಗರಕ್ತೇಶ್ವರೀ ಕ್ಷೇತ್ರದಲ್ಲಿ ನಾಗಮಂಡಲೋತ್ಸವದ ಪೂರ್ವಭಾವಿ ಸಭೆ

ಬಂಟ್ವಾಳ: ನಾಗ ಸಂಪತ್ತಿನ ಅಧಿದೇವತೆ. ಹಿಂದಿನ ಕಾಲದಲ್ಲಿ ಪೂರ್ವಜರು ಮಾಡುತ್ತಿದ್ದ ನಾಗಾರಧನೆ ವೈಶಿಷ್ಯಪೂರ್ಣ ಹಾಗೂ ಅರ್ಥಪೂರ್ಣವಾಗಿತ್ತು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ಪುದು ಗ್ರಾಮದ ನಾಣ್ಯ ಶ್ರೀನಾಗರಕ್ತೇಶ್ವರೀ ಕ್ಷೇತ್ರದಲ್ಲಿ ಜನವರಿ ತಿಂಗಳಿನಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ನಡೆದ ಅನುಜ್ಞ ಕಲಶ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು. ಈ ಸಂದರ್ಭ ಗೌರವಾಧ್ಯಕ್ಷ ಸುಜೀರು ಗುತ್ತು ಐತಪ್ಪ ಆಳ್ವ, ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರವೀಂದ್ರ ಕಂಬಳಿ, ಚಂದ್ರಪ್ರಕಾಶ್ ಶೆಟ್ಟಿ ಕಾರ್ಯಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ 25 ಸಾವಿರದ ಮೊದಲ ದೇಣಿಗೆಯನ್ನು ಮಾಣಿಲ ಕ್ಷೇತ್ರದ ವತಿಯಿಂದ ಸಲ್ಲಿಸಲಾಯಿತು.

Related posts

Leave a Reply

Your email address will not be published. Required fields are marked *