Header Ads
Header Ads
Breaking News

ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸುವುದು ಸರಿಯಲ್ಲ:ಮಂಜೇಶ್ವರದಲ್ಲಿ ಗೋಡ್ಸೆ ಪ್ರತಿಕೃತಿ ದಹಿಸಿ ಡಿವೈಎಫ್‌ಐನಿಂದ ಪ್ರತಿಭಟನೆ

ಮಂಜೇಶ್ವರ : ರಾಷ್ಟ್ರಪಿತ ಮಹಾತ್ಮಾ ಗಾಂಧಿಗೆ ಗುಂಡಿಕ್ಕಿದ ಭಯೋತ್ಪಾಧಕ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸುವವರನ್ನು ದೇಶದ್ರೋಹ ಪ್ರಕರಣದಡಿಯಲ್ಲಿ ಬಂಧಿಸುವಂತೆ ಡಿ ವೈಎಫ್‌ಐ ಪೈವಳಿಕೆ, ಬಾಯಾರು ವಿಲೇಜ್ ಸಮಿತಿ ಆಗ್ರಹಿಸಿದೆ.ಗಾಂಧಿ ಹುತಾತ್ಮ ದಿನದಂದು ಆಲಿಘಡ್ ನಲ್ಲಿ ಹಿಂದೂ ಮಹಾಸಭೆಯ ಕಾರ್ಯಕರ್ತರು ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿ ಅದರಿಂದ ರಕ್ತ ಚಿಮ್ಮುವಂತೆ ಮಾಡಿರುವುದನ್ನು ಹಾಗೂ ಗೋಡ್ಸೆ ಪರ ಘೋಷಣೆಗಳನ್ನು ಕೂಗಿ ಪ್ರತಿಮೆಗೆ ಮಾಲಾರ್ಪಣೆ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಗೋಡ್ಸೆ ಹಾಗೂ ಹಿಂದೂ ಮಹಾಸಭಾ ವಿರುದ್ದ ದಿಕ್ಕಾರ ಘೋಷಣೆಗಳನ್ನು ಕೂಗಿದ ಡಿ ವೈ ಎಫ್ ಐ ಕಾರ್ಯಕರ್ತರು ಗೋಡ್ಸೆ ಪ್ರತಿಕೃತಿಯನ್ನು ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪೈವಳಿಕೆಯಿಂದ ಬಾಯಾರು ತನಕ ನಡೆದ ಪ್ರತಿಭಟನಾ ಮೆರ್ವಣಿಗೆಗೆ ಝಕರಿಯ್ಯ ಬಾಯಾರು, ಆರಿಫ್ ಪೈವಳಿಕೆ, ಸುದರ್ಶನ ಬಾಯಾರು, ಸಿದ್ದೀಖ್ ಅವಳ, ಆದಂ ಅವಳ ಮೊದಲಾದವರು ಮುಂದಾಳತ್ವ ನೀಡಿದರು.

Related posts

Leave a Reply