Header Ads
Breaking News

ನಾನು ಉಡುಪಿ ಶಾಸಕ, ಜನರಿಂದ ಆರಿಸಿ ಬಂದ ಶಾಸಕ ನೆನಪಿರಲಿ : ಗರಂ ಆದ ಶಾಸಕ ರಘುಪತಿ ಭಟ್

ನಾನು ಉಡುಪಿಯ ಶಾಸಕ, ನಾನು ಜನರಿಂದ ಆರಿಸಿ ಬಂದ ಶಾಸಕ ನೆನಪಿರಲಿ ಮಾತನಾಡುವಾಗ ನೋಡಿ ಮಾತಾಡು, ಹೀಗಂತ ಗರಂ ಆಗಿದ್ದಾರೆ ಉಡುಪಿ ಶಾಸಕ ರಘುಪತಿ ಭಟ್. ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಬೈಕಾಡಿಯಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದ್ದ ಘನತ್ಯಾಜ್ಯ ನಿರ್ವಹಣಾ ಘಟಕ ಎಂಆರ್‍ಎಫ್ ಕುರಿತು ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಶಾಸಕರು ಮತ್ತು ಸ್ಥಳೀಯರ ನಡುವೆ ಜಟಾಪಟಿ ನಡೆದು ಶಾಸಕರು ಸಖತ್ ಗರಂ ಆದ್ರು. ಸ್ಥಳೀಯರು ನೂತನ ಘಟಕದ ವಿರುದ್ಧವಾಗಿ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಶಾಸಕರು ಈ ಘಟಕದಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ ಇದು ತಾಲೂಕಿಗೆ ಅತೀ ಅಗತ್ಯವಾದ ಘಟಕ ಎಂದು ಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದಾರೆ. ಇಷ್ಟಾದರೂ ಕೂಡ ಶಾಸಕರು ಮತ್ತು ಗ್ರಾಮಸ್ಥರ ನಡುವೆ ವಾಕ್ಸಮರ ನಡೆದಿದೆ. ಇಲಾಖೆಯ ಅಧಿಕಾರಿಗಳು ಮತ್ತು ಪೆÇಲೀಸ್ ಸಿಬ್ಬಂದಿಗಳ ಮುಂದೆ ಘಟಕ ವಿರುದ್ಧ ಅಕ್ರೋಶ ವ್ಯಕ್ತವಾಗಿತ್ತು. ಉತ್ತಮ ಯೋಜನೆ ನಮಗೆ ಬೇಕು ಎನ್ನುವ ಶಾಸಕರ ಮಾತಿಗೆ ಸ್ಥಳೀಯರು ಏಕ ವಚನದಲ್ಲಿ ಉತ್ತರ ನೀಡಿದ ಹಿನ್ನಲೆಯಲ್ಲಿ ಶಾಸಕ ರಘುಪತಿ ಭಟ್ ನಾನು ಏನು ಅನ್ನುದನ್ನು ಸಭೆಯಲ್ಲಿ ಗರಂ ಆಗಿ ತಿಳಿಸಿದ್ದಾರೆ. ಸದ್ಯ ಘಟಕ ವಿರುದ್ಧ ಹೋರಾಟ ಮುಂದುವರಿದಿದೆ.

Related posts

Leave a Reply

Your email address will not be published. Required fields are marked *