Header Ads
Header Ads
Header Ads
Breaking News

ನಾನು ಸಂವಿಧಾನ ಬದಲಿಸಿ ಎಂದು ಹೇಳಿಲ್ಲ ನಾನು ಅಂಬೇಡ್ಕರ್‌ಗೆ ಅಪಮಾನ ಮಾಡಿಲ್ಲ ದಲಿತರಿಗೆ ಮೀಸಲಾತಿ ವಿಸ್ತರಿಸಬೇಕು ಉಡುಪಿಯಲ್ಲಿ ಪೇಜಾವರ ಶ್ರೀ ಹೇಳಿಕೆ

 

ಸಂವಿಧಾನ ಬದಲಾಗಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಮಾತನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಕೃಷ್ಣ ಮಠದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು ನಾನು ಸಂವಿಧಾನ ಬದಲಿಸಿ ಎಂದು ಹೇಳಿಲ್ಲ. ನಾನು ಅಂಬೇಡ್ಕರ್ ಗೆ ಅಪಮಾನ ಮಾಡಿಲ್ಲ.

ದಲಿತರ ಮೀಸಲಾತಿ ವಿಚಾರ ನಾನು ಮಾತನಾಡಲೇ ಇಲ್ಲ. ದಲಿತರಿಗೆ ಮೀಸಲಾತಿ ವಿಸ್ತರಿಸಬೇಕು. ಸಂವಿಧಾನಕ್ಕೆ ಅಪಮಾನ ಮಾಡಿದರೆ ದೇಶಕ್ಕೆ ಅಪಮಾನ ಮಾಡಿದಂತೆ. ಸಾಹಿತಿಗಳಿಗೂ ಇದು ಅರ್ಥವಾಗಲಿಲ್ಲ ಅನ್ನುವುದೇ ವಿಪರ್ಯಾಸ. ಸಂವಿಧಾನ ಅಂಬೇಡ್ಕರ್ ಒಬ್ಬರೇ ರಚನೆ ಮಾಡಿದ್ದಲ್ಲ.ಸಂವಿಧಾನ ದೇಶದ ಎಲ್ಲಾ ಪ್ರತಿನಿಧಿಗಳು ರಚನೆ ಮಾಡಿದ್ದಾರೆ . ಅಲ್ಲಾಡಿ ಕೃಷ್ಣಸ್ವಾಮಿ, ಅಂಬೇಡ್ಕರ್ ಜೊತೆ ಅಯ್ಯರ್, ಕೆ.ಎಂ ಮುನ್ಶಿ, ಬೆನಗಲ್ ಮುಂತಾದವರೂ ಪ್ರಮುಖರು .

ದ್ವಾರಕನಾಥ್ ನಂತಹ ದೊಡ್ಡ ವಕೀಲರಿಗೆ ಅರ್ಥವಾಗದಿರುವುದು ವಿಪರ್ಯಾಸ ಎಂದರು. ಧರ್ಮದ ಹೆಸರಲ್ಲಿ ವಿಭಜನೆ ಬೇಡ. ಚರ್ಚ್ – ಮಸೀದಿಗಿರುವ ಸ್ವಾಯತ್ತತೆ ಎಲ್ಲರಿಗೂ ಬರಲಿ. ಶಾದಿ ಭಾಗ್ಯ ದಲಿತರಿಗೆ ಯಾಕೆ ಇಲ್ಲ. ದಲಿತರಲ್ಲಿ ಬಡವರು ಇಲ್ವಾ? ಎಂದು ಪ್ರಶ್ನಿಸಿದ ಶ್ರೀಗಳು ಉಡುಪಿ ಧರ್ಮ ಸಂಸದ್ ಯಶಸ್ವಿಯಾಗಿದೆ. ಧರ್ಮ ಸಂಸದ್ ಯಶಸ್ವಿಯಾದದ್ದನ್ನು ಬುದ್ಧಿ ಜೀವಿಗಳಿಗೆ, ಸಾಹಿತಿಗಳಿಗೆ ಸಹಿಸಲಾಗುತ್ತಿಲ್ಲ. ಸಾಹಿತಿಗಳಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಡೆಯುತ್ತಿದೆ. ಪಾಪದ ದಲಿತರನ್ನು ಇವರು ಎಳೆದು ತರುತ್ತಿದ್ದಾರೆ ಎಂದರು.

Related posts

Leave a Reply