Header Ads
Header Ads
Breaking News

ನಾನೂ ಮಂತ್ರಿಗಿರಿಯನ್ನು ಯಾವತ್ತೂ ಕೇಳಿಲ್ಲ. ಆದರೆ ಹಲವರಿಗೆ ನಾನು ಮಂತ್ರಿಯಾಗಬೇಕೆಂದು ಇದೆ. ಮಂಗಳೂರಲ್ಲಿ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಹೇಳಿಕೆ

 ನಾನೂ ಮಂತ್ರಿಗಿರಿಯನ್ನು ಯಾವತ್ತೂ ಕೇಳಿಲ್ಲ. ಆದರೆ ನಾನು ಹೋದಲೆಲ್ಲ ನೀವು ಮಂತ್ರಿ ಯಾವಾಗ ಆಗುತ್ತೀರಿ ಎಂಬ ಪ್ರಶ್ನೆಗಳೆ ಬರುತ್ತಿದೆ ಎಂದು ಜೆಡಿಎಸ್ ಮುಖಂಡ, ವಿಧಾನಪರಿಷತ್ ಸದಸ್ಯ ಬಿ.ಎಂ ಫಾರೂಕ್ ಅವರು ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಮಂತ್ರಿಯಾಗಬೇಕೆಂದು ಯಾವತ್ತು ವರಿಷ್ಠರಲ್ಲಿ ಕೇಳಿಲ್ಲ ಮತ್ತು ಅದರ ಬಗ್ಗೆ ಚರ್ಚಿಸಿಲ್ಲ. ನಾನು ರಾಜಕೀಯಕ್ಕೆ ಬಂದು ಕೇವಲ ಎರಡು ವರ್ಷಗಳಾಗಿದೆ. ನಾನು ಉದ್ಯಮದಲ್ಲಿರುವುದರಿಂದ ಜೊತೆ ಜೊತೆಗೆ ಸಾಮಾಜಿಕ ಕಾರ್ಯ ಮಾಡಲೆಂದು ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದರು. ಇನ್ನು ಮಂಗಳೂರು ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ದಿಪಡಿಸಲು 36 ಎಕರೆ ಭೂಮಿ ಸ್ವಾಧೀನ ಪಡಿಸಿ ರನ್ ವೇ ವಿಸ್ತರಿಸಲು ಮುಖ್ಯಮಂತ್ರಿಗಳ ಅಧೀನದಲ್ಲಿರುವ ಮೂಲಭೂತ ಸೌಕರ್ಯ ಇಲಾಖೆ ಮುಂದಾಗಿದೆ. ಮಂಗಳೂರು – ಬೆಂಗಳೂರು ಏರ್ ಇಂಡಿಯಾ ವಿಮಾನ ಹಾರಾಟಕ್ಕೆ ಒತ್ತಡವನ್ನು ಹೇರಲಾಗಿದೆ ಎಂದು ತಿಳಿಸಿದರು.

Related posts

Leave a Reply