Header Ads
Header Ads
Breaking News

ನಾಪತ್ತೆಯಾಗಿದ್ದವ ಶವ ಪತ್ತೆ. ಚಂದ್ರಹಾಸ ಶೆಟ್ಟಿ, ದಿವಾಕರ್ ಮೃತದೇಹ ಪತ್ತೆ.

ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದವರ ಮೃತದೇಹವು ಹೂಣಸೆಕಟ್ಟೆ ಬಿಜ್ಜ್ ಬಳಿ ಮತ್ತು ಕಣಿವೆ ಕಟ್ಟೆ ಬಳಿ ಪತ್ತೆಯಾಗಿದೆ. ತಣ್ಣೀರು ಬಾವಿ ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳದವರು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.ಬಜಪೆ ಠಾಣಾ ವ್ಯಾಪ್ತಿಯ ಕತ್ತಲ್ ಸಾರ್ ಕಲ್ಲಟ ಎಂಬಲ್ಲಿನ ನಿವಾಸಿ ಚಂದ್ರಹಾಸ ಶೆಟ್ಟಿ ಎಂಬುವರು ಗುರುವಾರ ನಾಪತ್ತೆಯಾಗಿದ್ದು, ಹೂಣಸೆಕಟ್ಟೆ ಬಿಜ್ಜ್ ಬಳಿ ಅವರು ಶವಪತ್ತೆಯಾಗಿದೆ. ಇದೇ ವೇಳೆ ಪಡುಪೇರಾರದ ದಿವಾಕರ್ ಅವರ ಮೃತ ದೇಹವೂ ಕತ್ತಲ್ ಸಾರ್ ಕಣಿವೆ ಕಟ್ಟೆ ಬಳಿ ಕೂಡ ಪತ್ತೆಯಾಗಿದ್ದು, ಇವರು ಗುರುವಾರದಿಂದ ಇವರು ನಾಪತ್ತೆಯಾಗಿದ್ದರು. ಇನ್ನು ಮೂರು ದಿನಗಳಿಂದ ನಿರಂತರವಾಗಿ ಸ್ಥಳೀಯರು ಹಾಗೂ ಆಗ್ನಿ ಶಾಮಕ ದಳದ ಸಿಬ್ಬಂದಿಗಳು, ತಣ್ಣೀರು ಬಾವಿ ಮುಳುಗು ತಜ್ಞರ ತಂಡ ಹುಟುಕಾಟ ನಡೆಸುತ್ತಿದ್ದರು. ಶನಿವಾರ ಮುಂಜಾನೆಯಿಂದಲೇ ತಣ್ಣೀರು ಬಾವಿ ಮುಳುಗು ತಜ್ಞರು ಚಂದ್ರಹಾಸ ಶೆಟ್ಟಿ ಮೃತ ದೇಹವು ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದರು.ಇದೀಗ ಶನಿವಾರ ಮಧ್ಯಾಹ್ನ ಹೊತ್ತಿಗೆ ಹೂಣಸೆ ಕಟ್ಟೆ ಬಿಜ್ಜ್ ಬಳಿ ಪತ್ತೆಯಾಗಿದೆ.ಇನ್ನುತಣ್ಣೀರು ಬಾವಿ ಮುಳುಗು ತಜ್ಞರು ಕಾರ್ಯಾಚರಣೆ ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

Leave a Reply