Header Ads
Header Ads
Breaking News

ನಾಪತ್ತೆಯಾಗಿದ್ದ ಸನ ಫಾತಿಮಾಳ ಮೃತದೇಹ ಪತ್ತೆ ಕಾಸರಗೋಡಿನ ಪವಿತ್ರಂಕಯಂ ಹೊಳೆಯಲ್ಲಿ ಪತ್ತೆಯಾದ ಶವ

ಕಾಸರಗೋಡು : : ಕಳೆದ ಆರು ದಿವಸಕ್ಕೆ ಮೊದಲು ಮನೆ ಅಂಗಳದಿಂದ ನಾಪತ್ತೆಯಾಗಿದ್ದ ಪಾಣತ್ತೂರು ಸಮೀಪದ ಬಾಪುಂಗಯ ನಿವಾಸಿ ಆಟೋ ಚಾಲಕನಾದ ಇಬ್ರಾಹಿಂ ಎಂಬವರ ಪುತ್ರಿ ಸನ ಫಾತಿಮಳ ಮೃತ ದೇಹವನ್ನು ಪವಿತ್ರಂ ಕಯಂ ಹೊಳೆಯಲ್ಲಿ ಪತ್ತೆ ಹಚ್ಚಲಾಗಿದೆ.

ನೀರಿನ ಸೆಳೆತಕ್ಕೆ ಸಿಲುಕಿ ಪೈಪಿನೊಳಗಿಂದಾಗಿ ಹೊರ ಹೊಮ್ಮಿದ ರೀತಿಯಲ್ಲಿ ಮೃತ ದೇಹ ಕಂಡು ಬಂದಿದೆ. ಕಳೆದ ಆರು ದಿನಗಳಿಂದ ಪೊಲೀಸ್, ಅಗ್ನಿಶಾಮಕದಳ ಹಾಗೂ ನಾಗರಿಕರು ಮಗುವಿಗಾಗಿ ಶೋಧ ನಡೆಸುತಿದ್ದರು. ಈ ಮಧ್ಯೆ ನೀರಿನೊಳಗೆ ಭಾರೀ ಆಳದಲ್ಲಿ ಯಾವುದೇ ವಸ್ತು ಸಿಲುಕಿದರೂ ಅವುಗಳ ಚಿತ್ರ ತೆಗೆಯುವ ಸಾಮರ್ಥ್ಯವುಳ್ಳ ಸ್ಯೂಚ್ ಕ್ಯಾಮರಾ ಉಪಯೋಗಿಸಿ ಪರಿಶೀಲನೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಉತ್ತಮವಾದ ಹವಾಮಾನದಲ್ಲಿ ಪೊಲೀಸರಿಗೆ ಮೃತ ದೇಹ ಪತ್ತೆಯಾಗಿದೆ. ಮನೆ ಅಂಗಳದಿಂದ ಮಗುವನ್ನು ಯಾರಾದರೂ ಅಪಹರಿಸಿರಬಹುದೆಂಬ ಶಂಕೆ ವ್ಯಾಪಕವಾಗಿತ್ತು. ಅಂತೂ ಕೊನೆಗೆ ಸನಫಾತಿಮ ಶವವಾಗಿಯೇ ಪತ್ತೆಯಾಗಿದ್ದಾಳೆ.

Related posts

Leave a Reply