Header Ads
Breaking News

ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ತಾತ್ಕಾಲಿಕ 1 ಲಕ್ಷ ಪರಿಹಾರ: ಮೀನುಗಾರಿಕಾ ಸಚಿವ ನಾಡಗೌಡ ಹೇಳಿಕೆ

ಇನ್ನು ಮುಂದೆ ಮೀನುಗಾರಿಕೆ ಬೋಟ್‌ಗಳು ಅವಘಡಕ್ಕೆ ಸಿಲುಕಿದಾಗ ಸ್ಪಷ್ಟ ಸುಳಿವು ಕೊಡುವ ಸಲಕರಣೆ ಅಳವಡಿಸಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದೇವೆ ಅಂತ ಮೀನುಗಾರಿಕಾ ಸಚಿವ ನಾಡಗೌಡ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವರು, ನಾಪತ್ತೆಯಾದ ಏಳು ಜನ ಮೀನುಗಾರರ ಹುಡುಕಾಟಕ್ಕೆ ಗರಿಷ್ಠ ಪ್ರಯತ್ನ ನಡೆಸಿದ್ದೇವೆ.ಆದರೆ ಈ ತನಕ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ ಎಂದರು. ಈಗಾಗಲೇ ನಾಪತ್ತೆಯಾದ ಮೀನುಗಾರರ ಕುಟುಂಬದವರನ್ನು ಭೇಟಿಯಾಗಿದ್ದೇನೆ.ಅವರಿಗೆ ಸಾಂತ್ವನ ಹೇಳಿದ್ದೇನೆ.ಸರಕಾರದಿಂದ ಸದ್ಯ ಒಂದು ಲಕ್ಷ ತಾತ್ಕಾಲಿಕ ಬಿಡುಗಡೆ ಮಾಡಲಾಗಿದೆ, ರಾಜ್ಯ ಸರಕಾರ ಹುಡುಕಾಟಕ್ಕೆ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡಿದೆ.

ಕೇಂದ್ರ ಗೃಹ ಸಚಿವರ ಭೇಟಿಗೆ ಅಪಾಯಿಂಟ್ ಮೆಂಟ್ ಕೇಳಿದ್ದೆವು. ಆದರೆ ನಮಗೆ ಅಪಾಯಿಂಟ್ ಮೆಂಟ್ ಕೊಡಲಿಲ್ಲ ಅಂತ ಹೇಳಿದ್ರು.
ಈ ಅವಘಡದ ಬಳಿಕ ಇಸ್ರೊ ಕೋರಿಕೆ ಮೇರೆಗೆ ಬೋಟ್ ಗಳಿಗೆ ಒಂದು ಸಲಕರಣೆ ಅಳವಡಿಕೆಗೆ ನಿರ್ಧಾರ ಮಾಡಿದ್ದೇವೆ.
ಇದಕ್ಕಾಗಿ ಬಜೆಟ್ ನಲ್ಲಿ ಮೂರು ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದರು.ಇನ್ನು ಮುಂದೆ ಯಾವುದೇ ಬೋಟ್ ಅವಘಡ ಆದರೂ ನಿಖರ ಮಾಹಿತಿ ಸಿಗುತ್ತೆ.ಚುನಾವಣೆ ಬಳಿಕ ಮೀನುಗಾರ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಬೋಟ್ ಗಳಿಗೆ ಸಲಕರಣೆ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ರು. ಬಿಜೆಪಿಯವರ ಆರೋಪಕ್ಕೆ ಗರಂ ಆದ ಸಚಿವರು,ಅನಂತಕುಮಾರ್ ಹೆಗಡೆ ಊರಲ್ಲಿ ಐವರು ಮೀನುಗಾರರು ನಾಪತ್ತೆಯಾಗಿದ್ದಾರೆ.ಅವರು ಒಬ್ಬ ಮೀನುಗಾರರ ಮನೆಗೆ ಹೋಗಿದ್ದಾರಾ?ಅನಂತಕುಮಾರ್ ಹೆಗಡೆಗೆ ಜವಾಬ್ದಾರಿ ಇಲ್ಲವೇ?ಅವರು ಸಂಸದರು ,ಮಂತ್ರಿಗಳು ,ಅವರಿಗೆ ಜವಾಬ್ದಾರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

Related posts

Leave a Reply

Your email address will not be published. Required fields are marked *