Header Ads
Header Ads
Breaking News

ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ:ಶವ ತೆಗೆಯಲು ಸಹಕರಿಸಿದ ಸಾಮಾಜಿಕ ಕಾರ್ಯಕರ್ತ

ಕಳೆದ ಎರಡು ದಿನಗಳ ಹಿಂದೆ ಒಳಕಾಡು ವಾರ್ಡಿನಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಹೊಟೇಲು ಕಾರ್ಮಿಕ ಗಣೇಶ್ ಭಟ್ ಅವರ ಶವವು ಮಣಿಪಾಲದ ಸಿ.ವಿ.ರಾಮನ್ ಬ್ಲಾಕ್, ಬಳಿಯ ಬಾವಿಯೊಂದರಲ್ಲಿ ಪತ್ತೆಯಾಗಿದೆ.

ಮೊಬೈಲ್ ಫೋನ್ ಲೋಕೆಶನ್ ಮೂಲಕ ಪೊಲೀಸರು ನಾಪತ್ತೆ ಪ್ರಕರಣವನ್ನು ಬೇಧಿಸಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಶಂಕೆ ವ್ಯಕ್ತವಾಗಿದೆ. ಮೃತನ ಸಂಬಂಧಿಕರು ಶವವನ್ನು ಗುರುತಿಸಿದ್ದಾರೆ. ಪೊಲೀಸ್ ತನಿಖೆ ಪ್ರಗತಿಯಲ್ಲಿದ್ದು, ಸಾವಿನ ನಿಖರ ಕಾರಣವು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಶವ ಬಾವಿಯಿಂದ ಮೇಲೆತ್ತಲು ಪೊಲೀಸ್ ಇಲಾಖೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದ್ದಾರೆ. ಶವವನ್ನು ಶವಗಾರಕ್ಕೆ ಸಾಗಿಸಲು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಚಿತ ಅಂಬುಲೇನ್ಸ್ ಸೇವೆ ನೀಡಿ ಸಹಕರಿಸಿದೆ.

Related posts

Leave a Reply