Header Ads
Breaking News

ನಾಳೆಯಿಂದ ಸಂಪೂರ್ಣ ಲಾಕ್‍ಡೌನ್ ಹಿನ್ನಲೆ : ಕದ್ರಿಯಲ್ಲಿ ಸಾಮಾಜಿಕ ಅಂತರವಿಲ್ಲದೆ ದಿನಸಿ ವಸ್ತುಗಳ ಖರೀದಿ

ದ.ಕ ಜಿಲ್ಲೆ ನಾಳೆಯಿಂದ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದ ದೃಶ್ಯ ನಗರದ ಕದ್ರಿ ಮಾರುಕಟ್ಟೆಯಲ್ಲಿ ಕಂಡುಬಂದಿದೆ. ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ರೂ ಜನರು ಇಂದೇ ಖರೀದಿಯಲ್ಲಿ ತೊಡಗಿದ್ದಾರೆ.

ಸಾಮಾಜಿಕ ಅಂತರ ಮರೆತು ದಿನಸಿ ವಸ್ತುಗಳನ್ನು ಖರೀದಿ ಮಾಡುವ ದೃಶ್ಯ ಕೂಡಾ ಕಂಡು ಬಂದಿದೆ. ಇಂದು ರಾತ್ರಿ 8 ಗಂಟೆಯಿಂದ ದ.ಕಜಿಲ್ಲೆ ಲಾಕ್‍ಡೌನ್ ಆಗಲಿದ್ದು, ಜುಲೈ 23 ಬೆಳಗ್ಗಿನ ಜಾವ 5 ಗಂಟೆ ತನಕ ಸಂಪೂರ್ಣ ಲಾಕ್ ಡೌನ್ ಇರಲಿದೆ. ಜಿಲ್ಲಾಡಳಿತವು ಲಾಕ್‍ಡೌನ್ ವೇಳೆ ದನಸಿ ವಸ್ತುಗಳ ಖರೀದಿಗೆ ಪ್ರತಿದಿನ ಬೆಳಗ್ಗೆ 8ಗಂಟೆಯಿಂದ 11ಗಂಟೆಯವರೆಗೆ ಅವಕಾಶ ನೀಡಿದೆ. ಆದ್ರೆ ಜಿಲ್ಲಾಡಳಿತ ಖಾಸಗಿ ವಾಹನಗಳ ಓಡಾಟಕ್ಕೆ ಸಂಪೂರ್ಣ ನಿಷೇಧ ಮಾಡಿದೆ.

Related posts

Leave a Reply

Your email address will not be published. Required fields are marked *