Header Ads
Header Ads
Breaking News

ನಾಳೆ ಕುಂದಾಪುರದಲ್ಲಿ ಮಧುಕರ್ ಶೆಟ್ಟಿಯವರ ಅಂತ್ಯಕ್ರಿಯೆ

ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಂತ ಊರು ಕುಂದಾಪುರ ತಾಲೂಕಿನ ಯೆಡಾಡಿಯಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.ಇಂದು ಬೆಳಗ್ಗೆ 11ರಿಂದ 2 ಗಂಟೆ ತನಕ ಯಲಹಂಕದಲ್ಲಿರುವ ಸಶಸ್ತ್ರ ಪೆÇಲೀಸ್ ಪಡೆಯ ತರಬೇತಿ ಶಾಲೆಯ ಆವರಣದಲ್ಲಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ಗಂಟೆಯ ಸುಮಾರಿಗೆ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯಲಾಗುವುದು. ಇಂದು ರಾತ್ರಿ 11 ಗಂಟೆಗೆ ಪಾರ್ಥಿವ ಶರೀರ ಮಧುಕರ ಶೆಟ್ಟಿಯವರ ಊರಿಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Related posts

Leave a Reply