Header Ads
Breaking News

ನಾಳೆ ರಾಜ್ಯಾದ್ಯಂತ ‘ಸಂಡೇ ಲಾಕ್ ಡೌನ್’ ಹಿನ್ನೆಲೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಂಪೂರ್ಣ ಲಾಕ್

ದ.ಕ ಜಿಲ್ಲೆಯಲ್ಲಿ ನಾಳೆ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಪ್ರತಿದಿನ ಬೆಳಗ್ಗೆ 8ರಿಂದ 11ಗಂಟೆಯವರೆಗೆ ಲಾಕ್‍ಡೌನ್ ರಿಯಾಯತಿ ಇತ್ತು. ಆದ್ರೆ ನಾಳೆ ಭನುವಾರ ಲಾಕ್‍ಡೌನ್ ಆಗಿರೋದ್ರಿಂದ ಯಾವುದೇ ರೀತಿಯ ರಿಯಾಯಿತಿ ಇರೋದಿಲ್ಲ.

ಕಳೆದ ಬಾನುವಾರವೂ ದ.ಕ ಜಿಲ್ಲೆ ಸಂಪೂರ್ಣವಾಗಿ ಬಂದ್ ಆಗಿ ಲಾಕ್‍ಡೌನ್ ಯಶಸ್ವಿಯಾಗಿತ್ತು. ಹಾಗೆಯೇ ಈ ಬಾರಿಯೂ ದ.ಕ ಜಿಲ್ಲಾದ್ಯಂತ ನಾಳೆ ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗಿದೆ. ಖಾಸಗಿ ವಾಹನಗಳಿಗೆ ರಸ್ತೆಗಿಳಿಸಲು ಅವಕಾಶವಿಲ್ಲ. ಅಗತ್ಯ ವಸ್ತುಗಳ ಸಾಮಾಗ್ರಿ ಖರೀದಿಗೂ ಕೂಡಾ ಯಾವುದೇ ರೀತಿಯ ಅವಕಾಶವಿಲ್ಲ. ನಾಳೆ ಇಡೀ ದಿನ ಲಾಕ್‍ಡೌನ್ ಇರಲಿದೆ ಎಂದು ದ.ಕ ಜಿಲ್ಲಾಧಿಕಾರಿ ಸಿಂದೂ ಬಿ ರೂಪೇಶ್ ಸ್ಪಷ್ಟ ಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *