Header Ads
Breaking News

ನಾವು ಸೇವಿಸುವ ಆಹಾರ ನಮ್ಮ ದೇಹಕ್ಕೆ ಔಷಧವಾಗಬೇಕು : ಆಹಾರ ತಜ್ಞ ಡಾ.ಖಾದರ್ ಉಪನ್ಯಾಸ

ಸಿರಿಧಾನ್ಯಗಳಂತಹ ಆಹಾರ ಸಂಸ್ಕøತಿ ಇರುವ ನಮ್ಮ ದೇಶದ ಜನರು, ಇಂದು ಸುಲಭವಾಗಿ ಆಹಾರ ತಯಾರಿ, ಸೇವೆನೆ ಮಾಡಲು ಆಧುನಿಕ ಆಹಾರ ವಿಧಾನಕ್ಕೆ ಒಗ್ಗಿಕೊಂಡಿರುವುದರಿಂದ ಸುಲಭವಾಗಿ ಆಹಾರ, ಔಷಧ ಮಾಫಿಯಕ್ಕೆ ಬಲಿಯಾಗುತ್ತಿದ್ದಾರೆ. ನಾವು ಸೇವಿಸುವ ಆಹಾರ ನಮ್ಮ ದೇಹಕ್ಕೆ ಔಷಧಿಯಾಗಬೇಕೇ ಹೊರತು, ಔಷಧಿಯೇ ನಮ್ಮ ಆಹಾರವಾಗಬಾರದು ಎಂದು ಆಹಾರ ತಜ್ಞ ಡಾ.ಖಾದರ್ ಅಭಿಪ್ರಾಯಪಟ್ಟರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿನಡೆದ `ಮನುಕುಲದ ಶ್ರೇಯಸ್ಸಿಗೆ ನೆಮ್ಮದಿಯ ಬದುಕಿಗೆ ಸಿರಿಧಾನ್ಯಗಳೇ ವರದಾನ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಪ್ಲಾಸ್ಟಿಕ್‍ನಲ್ಲಿ ಸುತ್ತಿದ್ದ ಆಹಾರ, ಪಾನೀಯಗಳು ಆರ್ಥಿಕವಾಗಿ ಸೇಫ್ ಹೊರತು, ಆರೋಗ್ಯಕ್ಕೆ ಸೇಫ್ ಅಲ್ಲ. ಪ್ಲಾಸ್ಟಿಕ್ ಮಾತ್ರವಲ್ಲದೇ ಮದ್ಯ ಸೇವನೆ, ನಾವು ದಿನ ನಿತ್ಯ ಕುಡಿಯುವ ತಂಪು ಪಾನೀಯ, ಹಾಲು, ಕಾಫಿ, ಟೀ ಕೂಡ ನಮ್ಮ ಆರೋಗ್ಯ ರಕ್ಷಣೆಗೆ ಪೂರಕವಾಗಿಲ್ಲ ಎಂದರು. ದೇಶಿಯ ಆಹಾರ ಪದ್ಧತಿಗಳಲ್ಲಿ, ನೈಸರ್ಗಿಕ ಕಷಾಯಗಳಿಂದ ಕಾಯಿಲೆ ಬಾರದಂತೆ ನೋಡುಕೊಳ್ಳಬೇಕೇ ಹೊರತು, ಅಧುನಿಕ ಔಷಧಿಗಳಿಂದ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ರೋಗ ಬಂದ ನಂತರ ಲಕ್ಷಾಂತರ ರೂಪಾಯಿ ವ್ಯಯಿಸುವ ಬದಲು, ಸರಳ, ಕಡಿಮೆ ವೆಚ್ಚದಲ್ಲಿ ನಮ್ಮ ದೇಹಕ್ಕೆ ಅನುಗುಣವಾದ ಆಹಾರ ಸೇವನೆ ಮಾಡುವುದು ಉತ್ತಮ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಅನಂತ ಕೃಷ್ಣ, ಸುಪ್ರಿಯಾ ಶಿರೊಲ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *