Header Ads
Breaking News

ನಿಂತಿಕಲ್ಲು ಜಂಕ್ಷನ್‍ನಲ್ಲಿ ಅಪಘಾತ ತಪ್ಪಿಸಲು ರಸ್ತೆಗೆ ಹಂಪ್ಸ್ ಅಗತ್ಯವಿದೆ : ಪವನ್ ರೈ ಮರವಂಜ ಆಗ್ರಹ

ಸುಳ್ಯ: ನಿಂತಿಕಲ್ಲು ಜಂಕ್ಷನ್‍ನಲ್ಲಿ ಕೆಲವು ದಿನಳಿಂದ ಸಣ್ಣ ಪುಟ್ಟ ಅಪಘಾತಗಳು ಕಂಡು ಬರುತ್ತಿದ್ದು ಇದನ್ನು ತಪ್ಪಿಸಲು ರಸ್ತೆಗೆ ಹಂಪ್ಸ್ ಅಗತ್ಯವಿದೆ ಎಂದು ತುಳುನಾಡ ರಕ್ಷಣಾ ವೇದಿಕೆಯ ಸುಳ್ಯ ತಾಲೂಕು ಯುವ ಘಟಕದ ಅಧ್ಯಕ್ಷ ಪವನ್ ರೈ ಮರವಂಜ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಇಲ್ಲಿ ಅನೇಕ ಸಣ್ಣ ಪುಟ್ಟ ಅಪಘಾತಗಳು ನಡೆಯುತ್ತಿರುವುದು ಕಂಡು ಬರುತ್ತಿದೆ. ಬೆಳ್ಳಾರೆ ಮತ್ತು ಸವಣೂರು ಈ ಎರಡು ಕೆಡಯಿಂದ ಬರುವ ವಾಹನಗಳು ನಿಂತಿಕಲ್ಲು ಜಂಕ್ಷನ್ ಸೇರಿ ನಂತರ ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಚಲಿಸುವವರಿದ್ದಾರೆ. ಇನ್ನು ಹಲವು ವಾಹನ ಚಾಲಕರು ಬೇರೆ ಜಿಲ್ಲೆಯಿಂದ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿದ್ದು ಇವರಿಗೆ ಈ ರಸ್ತೆಗಳ ಬಗ್ಗೆ ಅಷ್ಟೊಂದು ತಿಳಿದಿರುವುದಿಲ್ಲ ಹಾಗಾಗಿ ಅವರು ಬರುವ ರಭಸಕ್ಕೆ ಕೆಲವೊಂದು ಅಪಘಾತಗಳು ನಡೆಯುವ ಸಾಧ್ಯಗಳು ಸಹ ಹೆಚ್ಚಾಗಿ ಕಾಣುತ್ತಿವೆ ಎಂದು ಅವರು ತಿಳಿಸಿದ್ದಾರೆ. ನಿಂತಿಕಲ್ಲು ಜಂಕ್ಷನ್ ಒಂದು ಕೇಂದ್ರ ಬಿಂದು ಇದ್ದಂತೆ, ಇಲ್ಲಿ ಶಾಲಾ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳು ಸಹ ಈ ರಸ್ತೆಯಲ್ಲಿ ಅಡ್ಡಾಡುವವರಿದ್ದಾರೆ, ಇಲ್ಲಿ ಅಪಘಾತಗಳನ್ನು ತಪ್ಪಿಸಲು ರಸ್ತೆಗೆ ಹಂಪ್ಸ್ ಅಥವಾ ಬ್ಯಾರಿಕೇಡ್ ಹಾಕಿದರೆ ಬಹಳ ಉತ್ತಮವೆಂದು ಅವರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *