Header Ads
Header Ads
Breaking News

ನಿಖಿಲ್ – ಪ್ರಜ್ವಲ್‌ಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಮುನ್ಸೂಚನೆ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮಿಬ್ಬರು ಮೊಮ್ಮಕ್ಕಳು ನಿಖಿಲ್ ಮತ್ತು ಪ್ರಜ್ವಲ್ ಇಬ್ಬರಿಗೂ ಅವಕಾಶ ನೀಡುವ ಮುನ್ಸೂಚನೆಯನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ನೀಡಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿರುವ ಅವರು, ನಾನು ಪ್ರಜ್ವಲ್ ವಿಚಾರದಲ್ಲಿ ಮಾತ್ರ ಆಸಕ್ತಿ ತೋರಿಸುತ್ತೇನೆ ಎಂಬ ಭಾವನೆ ಬರುವುದು ಬೇಡ ಎಂಬ ಕಾರಣಕ್ಕೆ ನಿಖಿಲ್‌ಗೂ ಅವಕಾಶ ನೀಡಲು ನಿರ್ಧರಿಸಿದ್ದೇನೆ ಎಂದು ದೇವೇಗೌಡರು ಹೇಳಿದ್ದಾರೆ. “ಚುನಾವಣೆ ನಿಲ್ಲುತ್ತೇನೆ ಎಂದು ನಿಖಿಲ್ ಕೇಳಿಕೊಂಡರು. ನಿಲ್ಲು ಎಂದು ಹೇಳಿದ್ದೇನೆ,” ಎಂದೂ ದೇವೆಗೌಡರು ತಿಳಿಸಿದರು.
“ಪ್ರಜ್ವಲ್‌ಗೆ ರಾಜಕೀಯ ಬೇಡ ಎಂದು ಹೇಳಿದ್ದೆ. ಎಂ.ಟೆಕ್ ಮಾಡು ಎಂದು ಸಲಹೆ ನೀಡಿದ್ದೆ. ಆದರೆ, ಆತ ಮನಸ್ಸು ಮಾಡಲಿಲ್ಲ. ನಾನು ಏನೇ ಹೇಳಿದರೂ ಬೇರೆ ವೃತ್ತಿಗೆ ಪ್ರಜ್ವಲ್ ಆಸಕ್ತಿ ವಹಿಸಿಲ್ಲ. ಹಾಗಾಗಿ ಪಕ್ಷದ ಮುಖಂಡರ ಜೊತೆ ಮಾತನಾಡಿದ್ದೇನೆ. ಪ್ರಜ್ವಲ್ ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಚುನಾವಣೆಗಳವರೆಗೆ ರಾಜಕೀಯವಾಗಿ ಭಾಗವಹಿಸಿದ್ದಾನೆ,” ಎಂದು ಅವರು ಹೇಳಿದರು.

ಇನ್ನು ಲೋಕಸಭೆ ಮೈತ್ರಿ ಕುರಿತು ಮಾತನಾಡಿದ ದೇವೇಗೌಡರು, ” ಲೋಕಸಭೆಯಲ್ಲಿ 12 ಸ್ಥಾನ ಬಿಟ್ಟುಕೊಡಬೇಕು ಎಂದು ಕೇಳಿದ್ದೇನೆ. ನಾನು ಭಿನ್ನಾಭಿಪ್ರಾಯಗಳಿಗೆ ಅವಕಾಶ ಕೊಡುವವನಲ್ಲ. ಆ ಭಿನ್ನಾಭಿಪ್ರಾಯ ಮೈತ್ರಿಗೆ ಅಪಾಯವಾಗಲೂ ಬಿಡಲಾರೆ. ಸೌಹಾರ್ದಯುತವಾಗಿ ಅಂತಿಮ ನಿರ್ಧಾರಕ್ಕೆ ಬರುತ್ತೇವೆ,” ಎಂದು ಹೇಳಿದರು.

Related posts

Leave a Reply

Your email address will not be published. Required fields are marked *