Header Ads
Header Ads
Breaking News

ನಿಗದಿಯಾಗಿದೆ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ : ಗೆಲ್ಲುವ ಕುದುರೆಗಳ ಆಯ್ಕೆಗೆ ಕಾಂಗ್ರೆಸ್- ಬಿಜೆಪಿ ಪಾಳಯದಲ್ಲಿ ಕಸರತ್ತು

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅದರ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆಯ ಕಸರತ್ತು ಕೂಡ ನಡೆದಿದೆ. ಅದ್ರೆ ಇದೇ ಮೊದಲ ಬಾರಿಗೆ ಪಾಲಿಕೆ ಚುನಾವಣೆಯಲ್ಲಿ ಪುರುಷಗಿಂತ ಮಹಿಳಾ ಮಣಿಯರ ಲಾಬಿಯೇ ಜೋರಾಗಿದೆ. ಹಾಗಿದ್ರೆ ಲಾಬಿ ಮಾಡ್ತಿರೋದ್ಯಾರು..? ಏನು ಕತೆ? ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೇಲ್ಸ್..

ಯೆಸ್ … ಕೊನೆಗೂ ಮಂಗಳೂರು ಮಹಾನಗರ ಪಾಲಿಕೆ ದಿನಾಂಕ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳ ಕಸರತ್ತು ಕೂಡ ಆಡಂಭಗೊಂಡಿದೆ. ಅದ್ರಲ್ಲೂ ಮಂಗಳೂರು ಮಹಾನಗರ ಪಾಲಿಕೆಯ ಮೀಸಲಾತಿ ಪಟ್ಟಿಯಲ್ಲಿ ಈ ಬಾರಿ ಮಹಿಳೆಯರಿಗೆ ಶೇ.೫೦ರಷ್ಟು ಮೀಸಲಾತಿ ದೊರಕಿದೆ. ಪಾಲಿಕೆಯ 60 ವಾರ್ಡ್‌ಗಳ ಪೈಕಿ 29 ವಾರ್ಡ್‌ಗಳನ್ನ ಮಹಿಳೆಯರು ಪ್ರತಿನಿಧಿಸಲಿದ್ದಾರೆ. ಮೀಸಲಾತಿ ಬದಲಾಗಿರುವುದರಿಂದ ಮಹಿಳಾ ಆಕಾಂಕ್ಷಿಗಳು ಚುರುಕಿನಿಂದ ಓಡಾಡುತ್ತಿದ್ದಾರೆ.
 ಮಂಗಳೂರು ಪಾಲಿಕೆ ಚುನಾವಣೆಗೆ ಕಳೆದ ಸಲ ಶೇ.೩೦ರಷ್ಟು ಮಹಿಳಾ ಮೀಸಲಾತಿ ಇದ್ದರೆ, ಈ ಬಾರಿ ಶೇ.50ರಷ್ಟು ಮೀಸಲಾತಿ ಇರುವುದರಿಂದ ಮಹಿಳೆಯರೇ ಅಧಿಕ ಪ್ರಮಾಣದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ.50ರಷ್ಟು ಮಹಿಳಾ ಮೀಸಲು ಪ್ರಕಾರ ಬಾರಿ ಚುನಾವಣೆ ನಡೆಯಲಿದೆ. ಹೀಗಾಗಿ ಕೆಲವೊಂದು ಘಟಾನುಘಟಿ ನಾಯಕರು ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಈಗಾಗಲೇ ಪ್ರಮುಖ ಪಕ್ಷಗಳ ನಾಯಕರು ಮೊದಲ ಹಂತದ ಸಭೆ ನಡೆಸಿ ಅಭ್ಯರ್ಥಿ ಆಯ್ಕೆಯ ಕುರಿತು ಚರ್ಚೆ ನಡೆಸಿದ್ದಾರೆ.
 ರಾಜಕೀಯ ಪಕ್ಷಗಳಿಗೆ ಮಹಿಳಾ ಮೀಸಲಾತಿ ವಿಚಾರ ಸ್ವಲ್ಪ ತಲೆನೋವು ತಂದೊಡ್ಡಿದಂತೆ ಕಾಣುತ್ತಿದೆ. ಬಿಜೆಪಿಯು ಮೇಲಿಂದ ಮೇಲೆ ಉನ್ನತ ಮಟ್ಟದ ನಾಯಕರೊಂದಿಗೆ ಸಭೆ ನಡೆಸುವ ಮೂಲಕ ಚುನಾವಣೆಯನ್ನ ಎದುರಿಸಲು ಸಜ್ಜಾಗಿದೆ. ಪ್ರಸ್ತಕ ರಾಜಕೀಯ ವಾತಾವರಣ ಬಿಜೆಪಿ ಪರವಾಗಿದೆ. ಕಾಂಗ್ರೆಸ್ ವಿರೋಧಿ ಅಲೆಯೂ ಇದೆ. ಬಿಜೆಪಿಯಲ್ಲಿ ಸಾಕಷ್ಟು ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ ಅಂತಾರೆ ಬಿಜೆಪಿ ನಾಯಕರು.
ಇನ್ನು ಕಾಂಗ್ರೆಸ್ ಮುಖಂಡರೂ ಕೂಡ ಸಭೆಯ ಮೇಲೆ ಸಭೆಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಮಣಿಗಳೇ ಜಾಸ್ತಿ ಇರುವುದರಿಂದ ಪಾಲಿಕೆ ಆಡಳಿತದಲ್ಲಿ ಭ್ರಷ್ಠಚಾರ ಕಡಿಮೆಯಾಗಲಿದೆ ಅಂತಾರೆ ಕಾಂಗ್ರೆಸ್ ವಕ್ತಾರ ಎ.ಸಿ.ವಿನಯ್‌ರಾಜ್.
ಒಟ್ಟಿನಲ್ಲಿ 50 ಶೇ. ಮಹಿಳಾ ಮೀಸಲಾತಿಯು ಅಭ್ಯರ್ಥಿ ಆಯ್ಕೆಯ ಬಹುದೊಡ್ಡ ಸವಾಲನ್ನು ರಾಜಕೀಯ ಪಕ್ಷಗಳ ಮುಂದೆ ತಂದಿಟ್ಟಿದೆ. ಯಾವ ಮಾನದಂಡದಲ್ಲಿ, ಯಾವ ಅಭ್ಯರ್ಥಿಗಳನ್ನ ರಾಜಕೀಯ ಪಕ್ಷಗಳು ಆಯ್ಕೆ ಮಾಡಿಕೊಳ್ಳಲಿವೆ ಎನ್ನುವ ಕುತೂಹಲ ಪಾಲಿಕೆ ವಾಸಿಗಳಲ್ಲಿದೆ.

Related posts

Leave a Reply

Your email address will not be published. Required fields are marked *