Breaking News

ನಿಟ್ಟೂರಿನಲ್ಲಿ ಇಪ್ಪತ್ತು ಗುಡಿಸಲು ಭಸ್ಮ, ಪಾಳು ಬಾವಿಗೆ ಹಾಕಿದ ಬೆಂಕಿಯಿಂದ ದುರ್ಘಟನೆ, ಸ್ಥಳಕ್ಕೆ ಉಡುಪಿ ನಗರ ಸಭಾಧ್ಯಕ್ಷರ ಭೇಟಿ


ಪಾಳು ಬಾವಿಯಲ್ಲಿದ್ದ ಕಸಕ್ಕೆ ಹಾಕಿದ ಬೆಂಕಿಯಿಂದ ಗುಡಿಸಲುಗಳಲ್ಲಿದ್ದ ಎರಡು ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ೨೦ ಗುಡಿಸಲುಗಳು ಸುಟ್ಟು ಭಸ್ಮವಾದ ಘಟನೆ ನಿಟ್ಟೂರು ಅಡ್ಕದಕಟ್ಟೆಯಲ್ಲಿ ನಡೆದಿದೆ.
ಕಳೆದ ಹಲವು ವರ್ಷಗಳಿಂದ ವಲಸೆಯಾಗಿ ಬಂದ ಕೂಲಿ ಕಾರ್ಮಿಕ ಕುಟುಂಬಗಳು ವಾಸವಿದ್ದು ಇಂದು ಕೂಲಿ ಕಾರ್ಮಿಕ ಕುಟುಂಬದ ಓರ್ವ ಮಹಿಳೆ ಗುಡಿಸಲಿಗೆ ತಾಗಿಕೊಂಡೇ ಇದ್ದ ಪಾಳು ಬಾವಿಯಲ್ಲಿದ್ದ ಕಸಕ್ಕೆ ಬೆಂಕಿ ಹಾಕಿದ್ದಾಳೆ, ಪರಿಣಾಮ ಬೆಂಕಿಯ ಒಂದು ಕಿಡಿ ಗುಡಿಸಲಿಗೆ ತಾಗಿ ಬಳಿಕ ಗುಡಿಸಲಲ್ಲಿದ್ದ ಸಿಲಿಂಡರ್‌ಗೆ ತಾಗಿದೆ ಇದರಿಂದಾಗಿ ಸಿಲಿಂಡರ್ ಸ್ಪೋಟಗೊಂಡು ಸಮೀಪದ ಮತ್ತೊಂದು ಗುಡಿಸಲಲ್ಲಿದ್ದ ಸಿಲಿಂಡರ್ ಕೂಡ ಸ್ಫೋಟಗೊಂಡಿದೆ. ಈ ಎರಡು ಸಿಲಿಂಡರ್ ಸ್ಪೋಟದ ಪರಿಣಾಮ ಸುತ್ತಮುತ್ತಲಿದ್ದ ೨೦ ಗುಡಿಸಲು, ೧೦ಕ್ಕೂ ಅಧಿಕ ಮರಗಳು ಬೆಂಕಿಗಾಹುತಿಯಾಗಿದ್ದು ಅದೃಷ್ಟವಶಾತ್ ಗುಡಿಸಲಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ. ಬಳಿಕ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಇನ್ನು ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಘಟನೆಗೆ ವಿಷಾದ ವ್ಯಕ್ತಪಡಿಸಿ ನಗರಸಭೆಯ ಅನುಮತಿಯಿಲ್ಲದೆ ಸರಿಯಾದ ವ್ಯವಸ್ಥೆಯಿಲ್ಲದೆ ಗುಡಿಸಲು ನಿರ್ಮಿಸಿರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Related posts

Leave a Reply