Header Ads
Breaking News

ನಿಟ್ಟೆ ಪರಿಗಣಿಸಲ್ಪಟ್ಟಿರುವ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ದೇರಳಕಟ್ಟೆನಿಟ್ಟೆ ಪರಿಗಣಿಸಲ್ಪಟ್ಟಿರುವ ವಿಶ್ವವಿದ್ಯಾಲಯದ ದೇರಳಕಟ್ಟೆಯ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಕಾಲೇಜಿನ ಪತಂಜಲಿ ಸಭಾಂಗಣದಲ್ಲಿ ನಡೆಯಿತು.ಯೋಗಾಚಾರ್ಯ ಲಯನ್. ಶಿವರಾಂ ಶೆಟ್ಟಿವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿಶ್ವ ಯೋಗ ದಿನ ಘೋಷಣೆ ಬಳಿಕ ವಿಶ್ವದಾದ್ಯಂತ 117 ದೇಶಗಳಿಂದ ಯೋಗಾಭ್ಯಾಸಕ್ಕೆ ಬೆಂಬಲ ದೊರೆತಿದೆ.

ಈ ಮೂಲಕ ವಿಶ್ವಕ್ಕೆ ಯೋಗದ ಅರಿವು ಜೊತೆಗೆಯುವಜನರಿಗೆ ಯೋಗದ ಕುರಿತು ಮೂಡಿಸುವ ಕೆಲಸವಾಗಿದೆ. ಮಹರ್ಷಿ ಪತಂಜಲಿ ಯೋಗ ಸೂತ್ರದ ಪುಸ್ತಕದ ಆಧಾರದಲ್ಲಿ ಯೋಗ ನಡೆಯುತ್ತಿದೆ. ಯೋಗದ ಕುರಿತು ವೈನಿಕ ಸಂಶೋಧನೆಗಳು ನಿರಂತರವಾಗಿ ನಡೆದು, ಮನುಷ್ಯ ಜೀವನಕ್ಕೆ ಅವಶ್ಯಕ ಅನ್ನುವುದು ಸಾಬೀತಾಗಿದೆ. ತಾಂತ್ರಿಕ ತೆ ಮುಂದುವರಿದು ಯುವಸಮುದಾಯಕ್ಕೆ ನಿತ್ಯ ಚಟುವಟಿಕೆಗಳಿಗೆ ಸಮಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಾನಸಿಕ ಒತ್ತಡಗಳಿಗೆ ತುತ್ತಾಗಿ ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗುವವರ ಸಂಖ್ಯೆ ಪ್ರತಿ ವರ್ಷವೂ ಏರಿಕೆಯಾಗುತ್ತಲೇ ಇದೆ. ಇವೆಲ್ಲವನ್ನು ನಿಯಂತ್ರಿಸಲು ಯೋಗ ಅತ್ಯಾವಶ್ಯಕ. ಈ ಮೂಲಕ ಆರೋಗ್ಯವಂತ ದೇಹ ಹಾಗೂ ಧನಾತ್ಮಕ ಚಿಂತನೆಗಳ ಮನಸ್ಸು ನಿರ್ಮಿಸಲು ಸಾಧ್ಯ ಎಂದರು.

ನಿಟ್ಟೆ ವಿ.ವಿ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಭಾಗವಹಿಸಿ ಮಾತನಾಡಿ, ನಿಟ್ಟೆ ವಿ.ವಿ ಯನ್ನು ಆರೋಗ್ಯ ವಂತ ವಿ.ವಿ ಆಗುವ ಉದ್ದೇಶದಿಂದ ಹಲವು ಆರೋಗ್ಯಕರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ಯಾಂಪಸ್ಸಿನಲ್ಲಿ ತಿಂಡಿ ತಿನಿಸುಗಳಿಂದ ಹಿಡಿದು ವ್ಯಾಯಾಮ, ಯೋಗಾಭ್ಯಾಸಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯುವಸಮುದಾಯ ಜೀವನ ಶೈಲಿಯಲ್ಲಿ ಬದಲಾವಣೆಯಿಂದಾಗಿ ಒತ್ತಡ , ಮಧುಮೇಹ ಹಾಗೂ ಕ್ಯಾನ್ಸರ್ ನಂತಹ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇವೆಲ್ಲವನ್ನು ನಿಯಂತ್ರಿಸಲು ಯೋಗಾಭ್ಯಾಸದಿಂದ ಮಾತ್ರ ಸಾಧ್ಯ ಎಂದರು.

ಕ್ಷೇಮ ಡೀನ್ ಡಾ. ಪಿ.ಹೆಚ್ ಪ್ರಕಾಶ್, ಸಹ ಡೀನ್ ಡಾ. ಜೆ.ಪಿ ಶೆಟ್ಟಿ, ಕ್ಷೇಮ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಶಿವಕುಮಾರ್ ಹಿರೇಮಠ್, ಎನ್ ಎಸ್ ಎಸ್ ಅಧಿಕಾರಿ ಡಾ.ಸುಮಲತಾ ಶೆಟ್ಟಿ, ಡಾ.ಧಾಣೇಶ್ , ಡಾ.ಲಕ್ಷ್ಮೀಪ್ರಸನ್ನ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *