Header Ads
Header Ads
Breaking News

ನಿಟ್ಟೆ ವಿವಿಯಲ್ಲಿ ವನಮಹೋತ್ಸವ. ಎನ್‌ಎಸ್‌ಎಸ್ ಘಟಕದ ವತಿಯಿಂದ ಕಾರ್ಯಕ್ರಮ.

ನಿಟ್ಟೆ ವಿಶ್ವವಿದ್ಯಾಯಲದ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಎನ್.ಎಸ್.ಎಸ್ ಘಟಕದ ವತಿಯಿಂದ ಕಾಲೇಜು ವಠಾರದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.ಜಸ್ಟಿಸ್ ಎನ್.ಸಂತೋಷ್ ಹೆಗ್ಡೆ ಯವರು ಗಿಡವನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈಗಾಗಲೇ ಪನ್ನೀರ್ ಕ್ಯಾಂಪಸ್‌ನಲ್ಲಿ 400 ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದು, ಕ್ಷೇಮ ಕ್ಯಾಂಪಸ್‌ನಲ್ಲಿ 200 ಕ್ಕೂ ಅಧಿಕ ಗಿಡವನ್ನು ನೆಡಲಾಯಿತು. ನಿಟ್ಟೆ ವಿಶ್ವವಿದ್ಯಾಯಲದ ಕುಲಪತಿ ಪ್ರೊಫೆಸರ್ ಡಾ. ಸತೀಶ್ ಕುಮಾರ್ ಭಂಡಾರಿ, ಸಹಕುಲಪತಿ ಪ್ರೊ . ಡಾ. ಎಂ. ಎಸ್ . ಮೂಡಿತ್ತಾಯ, ರಿಜಿಸ್ಟ್ರಾರ್ ಪ್ರೊ.ಡಾ.ಅಲ್ಕಾ ಕುಲಕರ್ಣಿ, ಕ್ಷೇಮ ಡೀನ್ ಪ್ರೊ.ಡಾ.ಪ್ರಕಾಶ್, ವೈಸ್ ಡೀನ್ ಪ್ರೊ.ಡಾ.ಜೆ .ಪಿ ಶೆಟ್ಟಿ, ಮೆಡಿಕಲ್ ಸುಪೆರಿಂಡೆಂಟ್ ಡಾ. ಶಿವ ಕುಮಾರ್ ಹಿರೇಮಠ್, ಪ್ರೊ.ಡಾ.ಶ್ರೀಧರ್ ಶೆಟ್ಟಿ ಫೌಂಡರ್ ಡೀನ್ ಎ. ಬಿ ಶೆಟ್ಟಿ ಡೆಂಟಲ್ ಕಾಲೇಜು , ಎನ್ . ಏಸ್ . ಏಸ್ ಕೋ-ಆರ್ಡಿನೇಟರ್ ಪ್ರೊ.ಡಾ.ಸುಮಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply