Header Ads
Header Ads
Breaking News

8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನ ಪ್ರಯತ್ನ: ಮಾ.15ರಂದು ನಿಟ್ಟೆ ವಿವಿ ಪ್ರಾಯೋಜಿತ ತುಳು ಭಾಷಾ ನಿಘಂಟು ಲೋಕಾರ್ಪಣೆ

ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಲ್ಲಿ ಸೇರಿಸುವ ಪ್ರಯತ್ನದಲ್ಲಿ ಭಾಷಾವಿಷಯಕವಾದ ಶಾಸ್ತ್ರಗ್ರಂಥಗಳು ಹಾಗೂ ಪದಕೋಶಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಿಟ್ಟೆ ವಿವಿ ತುಳುಭಾಷಾ ಪೀಠ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಅವರ ಐದು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಹೊರತಂದಿರುವ ತುಳುಜ್ಞಾತಿ ಪದಕೋಶ ಸಂಶೋದನಾಸಕ್ತರಿಗೆ ಹಾಗೂ ಅಧ್ಯಯನ ನಡೆಸುವವರಿಗೆ ಬಹಳ ಉಪಯುಕ್ತವಾಗಲಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.

ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಸೆಮಿನಾರ್ ಹಾಲ್ ನಲ್ಲಿ ಮಂಗಳವಾರ ನಡೆದ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುಳುಜ್ಞಾತಿ ಪದಕಶೋಶ ರಚನೆಗೆ 2014ರಲ್ಲಿ ನಿಟ್ಟೆ ವಿವಿಯ ಕುಲಾಧಿಪತಿ ವಿನಯ್ ಹೆಗ್ಡೆ ಅವರು ಚಾಲನೆ ನೀಡುವ ಮೂಲಕ ಯೋಜನೆಯ ನಿಟ್ಟೆ ವಿವಿಯ ಪ್ರಾಯೋಜಿತ ಯೋಜನೆಯಾಗಿ ರೂಪುಗೊಂಡಿತು. ಗಣಕಯಂತ್ರಕ್ಕೆ ಭಾರತೀಯ ಲಿಪಿಗಳನ್ನು ಅಳವಡಿಸಿದ ಪ್ರೊ.ಕೆ.ಪಿ. ರಾವ್ ಅವರು ತಾವು ರೂಪಿಸಿದ “ಅಪಾರ’ಹೆಸರಿನ ಫಾಂಟ್ ತಂತ್ರಾಂಶವನ್ನು ತುಳುಜ್ಞಾತಿಪದಕೋಶಕ್ಕೆ ಒದಗಿಸಿದ ಡಾ. ಪದ್ಮನಾಭ ಕೇಕುಣ್ಣಾಯ ಅಕ್ಷರಶಃ ರೂಪುರೇಶೆಯನ್ನು ಸಿದ್ಧಪಡಿಸಿ ಅದರ ಕಾರ್ಯವಿಧಾನವನ್ನು ರೂಪಿಸಿದ್ದಾರೆ. ಹಾಗೆಯೇ ಇಂತಹ ಪದಕೋಶ ವಿಶ್ವದ ಎಲ್ಲರಿಗೂ ಲಭ್ಯವಾಗುವಂತೆ ತಜ್ಞರ ಸಲಹೆ ಪಡೆದು ಡಿಜಿಟಲೀಕರಣದ ವ್ಯವಸ್ಥೆಗೂ ಕಾರ್ಯಯೋಜನೆ ರೂಪಿಸಲಾಗುವುದು ಎಂದು ನುಡಿದರು.

ನೂತನ ತುಳುಜ್ಞಾತಿಪದಕೋಶ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಸಂಪಾದಕ್ವದಲ್ಲಿ ಡಾ. ವಾಮನ ನಂದಾವರ, ಬೆನೆಟ್ ಅಮ್ಮನ್ನ ಹಾಗೂ ತಾಂತ್ರತಿಕ ಸಹಾಯಕ ಪ್ರದ್ಯೋತ್ ಹೆಗ್ಡೆ ಹಾಗೂ ವಿವಿಧ ಸಂಸ್ಥೆಗಳುವ ವಿದ್ವಾಂಸರ ಸಹಯೋಗದಲ್ಲಿ ಸಂಪಾದನಾ ಕಾರ್ಯ ನಡೆದು ಸಂಪನ್ನಗೊಂಡಿದ್ದು ಮಾ. 15ರಂದು ಬೆಳಗ್ಗೆ 11.00ಗಂಟೆಗೆ ನಿಟ್ಟೆ ವಿವಿಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ “ಚಿಂತನಾ’ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.

ಆನಂತರ ಮಾತನಾಡಿದ ತುಳುಜ್ಞಾತಿ ಪದಕೋಶ ಡಾ. ಪದ್ಮನಾಭ ಕೇಕುಣ್ಣಾಯ 7064ಮುಖ್ಯ ಪದಗಳಿದ್ದು 37300ಕ್ಕೂ ಹೆಚ್ಚು ಜ್ಞಾತಿಪದಗಳಿಗೆ ಅರ್ಥ ನೀಡಲಾಗಿದೆ. ಎಲ್ಲ ಭಾಷೆಯ ಮೂಲಪ್ರತಿ ಓದಿಯೇ ಸಿದ್ಧಪಡಿಸಲಾಗಿದೆ. ತುಳು ಭಾಷಾ ನಿಗಮಟು ಪುಸ್ತಕದಲ್ಲಿರುವ ಲೋಪ ಇಲ್ಲಿ ತೆಗದಿದ್ದೇವೆ. ಕನಿಷ್ಠ 15ವರ್ಷಗಳು ಹಿಡಿಯಬೇಕಿದ್ದ ಜ್ಞಾತಿಪದಕೋಶದ ಕಾರ್ಯವನ್ನು ಕೇವಲ ಐದಉ ವರ್ಷದಲ್ಲಿ ಮುಗಿಸಿದ್ದೇವೆ. ತುಂಬ ಸಂತಸ ಕೊಟ್ಟಿದೆ.

ಡಾ. ಸಾಯಿಗೀತಾ ಅವರು ಮಾತನಾಡಿ, ತುಳುಜ್ಞಾತಿಪದಕೋಶ ತುಳುವರಿಗೆ ಮಾತ್ರವಲ್ಲ, ಇಡೀ ದ್ರಾವಿಡ ಕುಟುಂಬಕ್ಕೆ ಉಪಯುಕ್ತವಾಗಲಿದ್ದು ತುಳುವಿನಲ್ಲಿ ಯಾವುದೇ ಕೆಲಸಗಳನ್ನು ಮಾಡುವಾಗ ಮುಖ್ಯವಾಗಿ ಅದರ ಸಹೋದರಿ ಭಾಷೆಗಳಾದ ಕನ್ನಡ, ಕೊಡವ, ಮಲಯಾಳ, ಬ್ಯಾರಿ, ತಮಿಳು ಮತ್ತು ತೆಲುಗು ಭಾಷೆಗಳ ಅರಿವು ಅನಿವಾರ್ಯ. ಅಂತಹ ಸಂದರ್ಭದಲ್ಲಿ ತುಳುಪದಗಳಿಗೆ “ತುಳು ಜ್ಞಾತಿ ಪದಕೋಶ’ ಉಪಯುಕ್ತವಾಗಿದ್ದು ಭಾಷೆಯ ಜ್ಞಾನ ಹಾಗೂ ಸೊಬಗನ್ನು ಅರಿಯಲು ಸಹಕಾರಿಯಾಗಲಿದೆ.

ಸುದ್ದಿಗೋಷ್ಠಿಯಲ್ಲಿ ತುಳುಜ್ಞಾತಿ ಪದಕೋಶದ ಸಂಪಾದಕರಾದ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *