Header Ads
Header Ads
Breaking News

ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ಕ್ಷೇಮ ಆಡಿಟೋರಿಯಂನಲ್ಲಿ ನಡೆದ ರಾಷ್ಟ್ರೀಯ ಸೇವಾ ದಿನ-2018

ಉಳ್ಳಾಲ: ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ಪ್ರಯುಕ್ತ ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ಕ್ಷೇಮ ಆಡಿಟೋರಿಯಂನಲ್ಲಿ ನಡೆದ ರಾಷ್ಟ್ರೀಯ ಸೇವಾ ದಿನ-2018ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರಕಾರದ ಸಚಿವಾಲಯದ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಪರ್ಕಾಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರುರವರು, ಮುಂದಿನ ವರ್ಷಾಂತ್ಯದೊಳಗೆ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರಮಟ್ಟದ ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ನಡೆಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿ.ವಿ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ ಸಾಮಾಜಿಕ ಬದ್ಧತೆ, ನೀತಿಯಿಲ್ಲದ ಶಿಕ್ಷಣ ವ್ಯರ್ಥ. ನಿಟ್ಟೆ ವಿ.ವಿಯ ರಾ.ಸೇ.ಯೋ ಘಟಕ ಸ್ವಛ್ ಭಾರತ್, ಗ್ರಾಮ ಡಿಜಿಟಲೀಕರಣ, ಸಮಾಜಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಾರ್‍ಯಾಚರಿಸುತ್ತಿದೆ. ಇದೀಗ ಆಸ್ಪತ್ರೆಗೆ ಬರುವ ವೃದ್ಧರು, ಅಂಗವಿಕಲರ ಸೇವಾ ಕಾರ್ಯದಲ್ಲಿ ಕೈ ಜೋಡಿಸುವ ಭರವಸೆಯನ್ನು ನೀಡಿರುವ ಕಾರ್ಯ ಶ್ಲಾಘನೀಯ ಎಂದರು.

ಇದೇ ಸಂದರ್ಭ ನಿಟ್ಟೆ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ಯೋಜನೆಗಳ ಕೈಪಿಡಿ ‘ ನೈ-ಯೋಜನಾ’ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪ್ರಕಾಶ್, ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೃಷ್ಣ ನಾಯಕ್, ಪ್ಯಾರಮೆಡಿಕಲ್ ವಿಭಾಗದ ವೈಸ್ ಡೀನ್ ಡಾ. ಅಮೃತ್ ಮಿರಾಜ್ ಕರ್, ನಿಟ್ಟೆ ವಿ.ವಿ ಆಡಳಿತ ವಿಭಾಗದ ವೈಸ್ ಡೀನ್ ಡಾ. ಜೆ.ಪಿ ಶೆಟ್ಟಿ, ನಿಟ್ಟೆ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಯಸ್ ಶಾಸ್ತ್ರಿ, ನಿಟ್ಟೆ ವಿ.ವಿ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ವಿಭಾಗದ ಆಡಳಿತ ನಿರ್ದೇಶಕ ಪ್ರೊ.ಅನಿರ್ಬಾನ್ ಚಕ್ರಬರ್ತಿ, ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಫಾತಿಮಾ ಡಿಸಿಲ್ವಾ, ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಹಿರೇಮಠ್ ಮುಖ್ಯ ಅತಿಥಿಗಳಾಗಿದ್ದರು.

ನಿಟ್ಟೆ ಫಿಸಿಯೋಥೆರಪಿ ವಿಭಾಗದ ಪ್ರಾಂಶುಪಾಲ ಡಾ.ಧಾನೇಶ್ ಕುಮಾರ್ ನಿಟ್ಟೆ ಸೇವಾದಳ ಕುರಿತ ಮಾಹಿತಿ ನೀಡಿದರು. ನಿಟ್ಟೆ ವಿ.ವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಸುಮಲತಾ ಶೆಟ್ಟಿ, ರಮಾ ಅಡಿಗ ಉಪಸ್ಥಿತರಿದ್ದರು,

Related posts

Leave a Reply