Breaking News

ನಿಡ್ಡೋಡಿಯಲ್ಲಿ ಚಿರತೆ ದಾಳಿಗೆ ದನ ಕರುಗಳು ಬಲಿ, ಸುತ್ತಲ ಪರಿಸರದ ಜನತೆಯಲ್ಲಿ ಆತಂಕ


ಕಲ್ಲಮುಂಡ್ಕೂರು ಗ್ರಾ. ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿ ಗ್ರಾಮದ ಬಂಗೇರಪದವಿನಲ್ಲಿ ಚಿರತೆಯ ದಾಳಿಗೆ ತುತ್ತಾಗಿ ಎರಡು ದನಗಳು ಮತ್ತು ಎರಡು ಕರುಗಳು ಬಲಿಯಾದ ಘಟನೆ ಬೆಳಕಿಗೆ ಬಂದಿದೆ.
ಬಂಗೇರಪದವಿನ ರಾಮಪ್ಪ ಗೌಡ ಎಂಬವರಿಗೆ ಸೇರಿರುವ ದನಕರುಗಳು ಚಿರತೆಯ ದಾಳಿಗೆ ಸಿಕ್ಕಿ ಬಲಿಯಾದವುಗಳು. ರಾಮಪ್ಪ ಗೌಡ ಅವರು ತಮ್ಮ ದನಕರುಗಳನ್ನು ಎಂದಿನಂತೆ ಮೇಯಲು ಗುಡ್ಡೆಗೆ ಬಿಟ್ಟಿದ್ದರು. ಆದರೆ ಯಾವಾಗಲೂ ಸಂಜೆ ವೇಳೆಗೆ ಮನೆ ಕಡೆ ಬರುತ್ತಿದ್ದ ಗೋವುಗಳು ಸಂಜೆ ಹಿಂತಿರುಗಿ ಬಂದಿರಲಿಲ್ಲ. ಮನೆಯವರು ಮತ್ತು ಸ್ಥಳಿಯರು ಬೆಳಗ್ಗೆ ಹುಡುಕಾಡಿದಾಗ ಮೂಲ್ಕಿ ಯದುನಾರಾಯಣ ಶೆಟ್ಟಿ ಎಂಬವರಿಗೆ ಸೇರಿರುವ ಬಂಗೇರಪದವಿನ ಬೋಂಟಲ್ಕೆ ಪ್ರದೇಶದಲ್ಲಿರುವ ರಬ್ಬರ್ ತೋಟದಲ್ಲಿ ಒಂದು ಕರುವಿನ ಹೊಟ್ಟೆಯ ಭಾಗ ಮತ್ತು ಒಂದು ಹಾಲು ಕರೆಯುವ ಹಸುವಿನ ಕಳೇಬರ ಅರ್ಧ ತಿಂದ ಸ್ಥಿತಿಯಲ್ಲಿ, ಇನ್ನೊಂದು ಗರ್ಭಿಣಿ ಹಸುವಿನ ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿರುವ ಸ್ಥಿತಿಯಲ್ಲಿ ಬೇರೆ ಬೇರೆ ಕಡೆಯಲ್ಲಿ ಪತ್ತೆಯಾಗಿದೆ. ಆದರೆ ಇನ್ನೊಂದು ಕರು ಎಲ್ಲಿದೆ ಎಂದು ಪತ್ತೆಯಾಗಿಲ್ಲ.
ಮೂಡುಬಿದಿರೆ ವಲಯಾರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಕಿನ್ನಿಗೋಳಿ ಘಟಕದ ಉಪ ವಲಯಾರಣ್ಯಾಧಿಕಾರಿ ಕೀರ್ತಿ ಮ್ಯಾಥ್ಯು ಮತ್ತು ಅರಣ್ಯ ರಕ್ಷಕ ಶಂಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾ. ಪಂ ಸದಸ್ಯರಾದ ಜೋಕಿಂ ಕೊರೆಯಾ, ರಾಮ ಗೌಡ, ಸ್ಥಳೀಯರಾದ ಪುರುಷೋತ್ತಮ ಗೌಡ, ಸುಭಾಷ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

Related posts

Leave a Reply