Breaking News

ನಿಡ್ಪಳ್ಳಿ ಬ್ಯಾಂಕ್ ಉದ್ಯೋಗಿ ನೇಣು ಬಿಗಿದು ಆತ್ಮಹತ್ಯೆ, ಮೊಬೈಲ್ ಕಾಣೆ ಕಾರಣ ನಿಗೂಢ

ಪುತ್ತೂರಿನ ಐಸಿಐಸಿಐ ಬ್ಯಾಂಕ್ ಉದ್ಯೋಗಿಯೋರ್ವ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲ್ಲೂಕಿನ ನಿಡ್ಪಳ್ಳಿ ಗ್ರಾಮದ ಪಳಂಬೆ ಎಂಬಲ್ಲಿ ನಡೆದಿದೆ.
ನಿಡ್ಪಳ್ಳಿ ಗ್ರಾಮದ ಪಳಂಬೆ ನಿವಾಸಿ ಸುಂದರ ಪೂಜಾರಿ ಅವರ ಪುತ್ರ ಹರೀಶ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಈತ ಪುತ್ತೂರಿನ ಐಸಿಐಸಿಐ ಬ್ಯಾಂಕ್ ಉದ್ಯೋಗಿ ಆಗಿರುವ ಹರೀಶ್ ಪೂಜಾರಿ, ಕೆಯ್ಯೂರು ಗ್ರಾಮದ ಮಾಡಾವು ಸಮೀಪದ ಪಲ್ಲತ್ತಡ್ಕದಲ್ಲಿರುವ ಹೊಸಮ್ಮ ಹೋಂ ಪ್ರೊಡಕ್ಟ್‌ನ ಮಾಲಕರಾಗಿದ್ದರು ಎಂದು ಹೇಳಲಾಗಿದೆ. ಮಂಗಳವಾರ ಮನೆಯಲ್ಲಿದ್ದ ಅವರು ಬೆಳಗ್ಗಿನ ವೇಳೆ ಮನೆಯ ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ತಾಯಿ ಮನೆಯಿಂದ ಹೊರಗಿದ್ದ ವೇಳೆ ಹರೀಶ್ ಪೂಜಾರಿ ಅವರು ಈ ಕೃತ್ಯ ಎಸಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಹರೀಶ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಂಪ್ಯ ಪೊಲೀಸರು ಆತ ಕೆಲಸ ಮಾಡುತ್ತಿದ್ದ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದು, ಬ್ಯಾಂಕಿನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಆತ್ಮಹತ್ಯೆ ಮಾಡಿಕೊಂಡ ಹರೀಶ್ ಪೂಜಾರಿ ಬಳಸುತ್ತಿದ್ದ ಮೊಬೈಲ್ ಕಾಣೆಯಾಗಿರುವುದು ನಿಗೂಢತೆ ಸೃಷ್ಠಿಸಿದ್ದು, ಆತ ಪ್ರೇಮ ಪ್ರಕರಣದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ಮೃತರ ತಾಯಿ ಹೊನ್ನಮ್ಮ ಅವರು ನೀಡಿರುವ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply