Header Ads
Breaking News

ನಿತ್ಯಾನಂದ ಸ್ವಾಮೀಜಿಯ ಆಶೀರ್ವಾದ ಪಡೆದ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ

ನಮ್ಮ ಜೀವನದಲ್ಲಿ ನಿತ್ಯಾನಂದ ನಾಮಸ್ಮರಣೆ ನಿರಂತರವಾಗಿರಲಿ ಎಂದು ನಿತ್ಯಾನಂದ ಸ್ವಾಮಿಯ ಪರಮಭಕ್ತ ಆರಾಧಕ ಬೇವಿನಕೊಪ್ಪ ಬೈಲಹೊಂಗಲ ಆನಂದಾಶ್ರಮದ ವಿಜಯಾನಂದ ಸ್ವಾಮಿಯವರು ಹೇಳಿದರು ಅವರು ಹಳೆಯಂಗಡಿ ಪ್ರದೇಶದಲ್ಲಿ ತಮ್ಮ ಭಕ್ತರ ಮನೆಗಳಿಗೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಾಚನ ನೀಡಿ ಅತ್ಮದಲ್ಲಿರುವ ಶಾಶ್ವತ ಆನಂದವೇ ನಿತ್ಯಾನಂದ ಇದರಲ್ಲಿ ಅದ್ಭುತ ಶಕ್ತಿ ಇದೆ, ಜೀವನದಲ್ಲಿ ಭೇಧ ಬಾವವನ್ನು ತೊರೆದು ಹಾಕಿ ಎಲ್ಲರೂ ಒಂದೇ ಎನ್ನುವಂತೆ ಬಾಳಿ ಬದುಕಬೇಕು, ಜಾತಿ ಭೇದ ಮಾಡದೆ ಪ್ರತಿಯೊಬ್ಬನಲ್ಲಿರುವ ಅತ್ಮವನ್ನು ನೋಡಿ ಎಂದರು.

ಹಳೆಯಂಗಡಿಯ ಬಾಲ ಭೋಜನ ಅಮೀನ್ ಎಂದು ಪ್ರಖ್ಯಾತಿ ಪಡೆದ ದಿ. ರಾಮು ಅಮೀನ್ ಎಂಬುವವರ ಮನೆಗೆ ಭೇಟಿ ನೀಡಿ ನಿತ್ಯಾನಂದ ಸ್ವಾಮಿಯವರಿಗೆ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು. ನಂತರ ಮನೆಯಲ್ಲಿರುವ ನಿತ್ಯಾನಂದ ಸ್ವಾಮಿಯವರ ವಿವಿಧ ಬಂಗಿಯ ಭಾವಚಿತ್ರವನ್ನು ವೀಕ್ಷಿಸಿದರು. ನಂತರ ಹಳೆಯಂಗಡಿಯ ಗುರುಕೃಪಾ ಮನೆಗೆ ಭೇಟಿ ನೀಡಿದರು, ಅಲ್ಲಿ ರಾಜೇಶ್ ಹಳೆಯಂಗಡಿ ಪಲ್ಲವಿ ದಂಪತಿಗಳು ಮತ್ತು ಭಕ್ತರು ವಿಜಯಾನಂದ ಸ್ವಾಮಿಯವರ ಗುರು ಪಾದಪೂಜೆ ನೆರವೇರಿಸಿದರು. ನಂತರ ಉಳ್ಳಾಲದ ಅವದೂತ ಸದ್ಗುರು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿದ್ದ ನೂರಾರು ಭಕ್ತರಿಗೆ ಆಶೀರ್ವಾಚನ ನೀಡಿದರು.

Related posts

Leave a Reply

Your email address will not be published. Required fields are marked *