Breaking News

ನಿತ್ಯ ಕಪ್ಪು ಹೊಗೆ ಉಗುಳುತ್ತಿರುವ ರಾಜ್ಯ ಸಾರಿಗೆ ಬಸ್, ಕಡಿವಾಣ ಹಾಕುವವರು ಯಾರು?

ನಮ್ಮ ಖಾಸಗಿ ವಾಹನಗಳು ಎಲ್ಲಿಯಾದರೂ ಕಪ್ಪು ಹೊಗೆ ಉಗುಳಿದರೆ ಸಾರಿಗೆ ಇಲಾಖಾ ಅಧಿಕಾರಿಗಳು ಹೊಗೆ ಪರೀಕ್ಷೆ ಮಾಡಿಸಿಕೊಂಡಿಲ್ಲವೇ ಎಂದು ದಂಡ ಹಾಕುತ್ತಾರೆ. ಆದರೆ ನಿತ್ಯ ಕಪ್ಪು ಹೊಗೆಯನ್ನೇ ಉಗುಳುತ್ತಾ ಹೋಗುವ ರಾಜ್ಯ ಸಾರಿಗೆ ಬಸ್ಸುಗಳಿಗೆ ಕಡಿವಾಣ ಹಾಕುವವರು ಯಾರು? ಹೀಗೊಂದು ಪ್ರಶ್ನೆ ಬಂಟ್ವಾಳದ ಸಾರ್ವಜನಿಕರನ್ನು ಕಾಡಲಾರಂಭಿಸಿದೆ.
ಸಾರಿಗೆ ನಿಯಮದ ಪ್ರಕಾರ ಎಲ್ಲಾ ಸರಕಾರಿ ಬಸ್ಸುಗಳು ಪ್ರತಿ ಆರು ತಿಂಗಳಿಗೊಮ್ಮೆ ವಾಯು ಮಾಲಿನ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕಾದ್ದು ಅಗತ್ಯ. ಆದರೆ ಗ್ರಾಮೀಣ ಭಾಗಗಳಲ್ಲಿ ಓಡಾಡುವ ಸರಕಾರಿ ಬಸ್ಸುಗಳು ಮಾತ್ರ ಈ ನಿಯಮಕ್ಕೆ ಹೊರತಾಗಿವೆ. ಏಕೆಂದರೆ ಕಡು ಕಪ್ಪು ಬಣ್ಣದ ಹೊಗೆಯನ್ನು ಚೆಲ್ಲುತ್ತಾ ರಾಜಾರೋಷವಾಗಿ ಓಡಾಡುವ ದೃಶ್ಯ ಸಾಮಾನ್ಯವಾಗಿದೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡುವ ಇತರ ವಾಹನಗಳಿಗೂ ತೊಂದರೆಯಾಗುತ್ತಿದೆ. ವಾಯುಮಾಲಿನ್ಯದೊಂದಿಗೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಆರೋಗ್ಯದ ಭೀತಿ ಕಾಡಲಾರಂಭಿಸುತ್ತದೆ. ಸರಕಾರಿ ಬಸ್ಸುಗಳಲ್ಲಿ ಮಾಲಿನ್ಯ ನಿಯಂತ್ರಣ ಪರೀಕ್ಷೆಯನ್ನು ಸಾರಿಗೆ ಇಲಾಖೆ ಮತ್ತು ಪೋಲೀಸ್ ಇಲಾಖೆ ತಪಾಸಣೆ ನಡೆಸದೇ ಇರುವುದು ಇದಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗಗಳಲ್ಲಿ ಓಡಾಡುವ ಕೆಎಸ್‌ಆರ್‌ಟಿಸಿ ಬಸ್ಸುಗಳ ಸ್ಥಿತಿ ಉತ್ತಮವಾಗಿರದೇ ಇರುವುದರಿಂದ ವಾಯು ಮಾಲಿನ್ಯದ ಪ್ರಮಾಣವೂ ಹೆಚ್ಚಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಲಿ ಎನ್ನುವುದು ನಾಗರೀಕರ ಆಶಯ

Related posts

Leave a Reply