Header Ads
Header Ads
Breaking News

ನಿಮ್ಮಿಂದ ಪಾಠ ಕೇಳಲು ಬಂದಿಲ್ಲ ಕಮಿಷನ್ ಹೊಡೆಯಲು ಬಿಡಲ್ಲ, ಹುಷಾರ್ ಅಧಿಕಾರಿಗಳಿಗೆ ಶಾಸಕ ಸುಕುಮಾರ ಶೆಟ್ಟಿ ಖಡಕ್ ವಾರ್ನಿಂಗ್.

ಕುಂದಾಪುರ: ನಿಮ್ಮಿಂದ ಪಾಠ ಕೇಳಲು ನಾವು ಇಲ್ಲಿಗೆ ಬಂದಿಲ್ಲ. ಎಲ್ಲಾ ಇಲಾಖೆಗಳಲ್ಲೂ ಸಾಕಷ್ಟು ಸಮಸ್ಯೆಗಳು ತಾಂಡವಾಡುತ್ತಿವೆ. ಬಡ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ. ಏನೇ ಆದರೂ ಸಾರ್ವಜನಿಕರಿಗೆ ತೊಂದರೆ ಕೊಡಕೂಡದು. ಪ್ರಮಾಣಿಕವಾಗಿ ಕೆಲಸ ಮಾಡಬೇಕು, ಕಮಿಷನ್ ಹೊಡೆಯಲು ಬಿಡೋದಿಲ್ಲ ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅರಣ್ಯ ಇಲಾಖೆಯ ಪ್ರತಿಯೊಂದು ಟೆಂಡರ್ ಮೊದಲಾದ ಎಲ್ಲಾ ವ್ಯವಸ್ಥೆಗಳು ನಮಗೆ ತಿಳಿಯುವಂತೆ ಪಾರದರ್ಶಕ ವ್ಯವಸ್ಥೆ ಮಾಡಿರಿ. ನುಣಿಚಿಕೊಳ್ಳುವ ಯಾವ ಪ್ರಯತ್ನವೂ ಮಾಡಬೇಡಿ, ಖುಷಿ ಬಂದ ಹಾಗೆ ಕೆಲಸ ಮಾಡಬೇಡಿ ಎಂದರು.ಸಿದ್ದಾಪುರ, ಬೈಂದೂರಿನಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಹಲವು ಸಮಸ್ಯೆಗಳಿವೆ. ಬೈಂದೂರಿನಲ್ಲಿ 108 ಆಂಬುಲೆನ್ಸ್ ಸೇವೆಯಲ್ಲಿರುವಾಗ ಇನ್ನೊಂದು ರೋಗಿಗಳ ಮನೆಯವರು ಕರೆ ಮಾಡಿದರೆ ಸರ್ಕಾರಿ ಆಂಬುಲೆನ್ಸ್ ಕಳುಹಿಸುತ್ತಿಲ್ಲ ಎಂಬ ದೂರುಗಳು ಬಂದಿವೆ ಮತ್ತು ಸಿದ್ದಾಪುರ 10 ಆಂಬುಲೆನ್ಸ್ ಶೋಚನೀಯ ಸ್ಥಿತಿಯಲ್ಲಿದೆ ಎಂದು ಸುಕುಮಾರ ಶೆಟ್ಟಿ ಹೇಳಿದರು. ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಇಒ ಕಿರಣ್ ಪಡ್ನೇಕರ್, ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ, ತಾ.ಪಂ ನರಾಯಣ ಗುಜ್ಜಾಡಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಹಾಜರಿದ್ದರು.

Related posts

Leave a Reply