Header Ads
Header Ads
Breaking News

ನಿಯಂತ್ರಣ ತಪ್ಪಿ ಎರಡು ಬೈಕ್‌ಗಳಿಗೆ ಜೀಪು ಡಿಕ್ಕಿ ಬೈಕ್ ಸವಾರರಿಗೆ ಗಂಭಿರ ಗಾಯ

ಮೂಡುಬಿದಿರೆ : ಜೀಪೊಂದು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮೂಡುಬಿದಿರೆಯಲ್ಲಿ ಶನಿವಾರ ರಾತ್ರಿ ಗಾಂಧಿನಗರದಲ್ಲಿ ನಡೆದಿದೆ.ಬೈಕ್ ಸವಾರ ಕಲ್ಲಮುಂಡ್ಕೂರಿನ ನಿವಾಸಿ ಆಂಟನಿ (45) ಮತ್ತು ಕಾಪಿಕಾಡು ನಿವಾಸಿ ಅಶೋಕ್ (19) ಅಪಘಾತಕ್ಕೊಳಗಾದವರು.

ವಿದ್ಯಾಗಿರಿಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕೇರಳ ಮೂಲದ ಸಾಜು ಕೆ. ಎಂಬವರ ಜೀಪು ಗಾಂಧಿನಗರದ ಬಳಿ ಒಂದು ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಕಂಟ್ರೋಲ್ ಸಿಗದೆ ಅತೀ ವೇಗದಿಂದ ಬಂದು ಸ್ವಲ್ಪ ದೂರದಲ್ಲಿ ಬರುತ್ತಿದ್ದ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ.ಈ ಸಂದರ್ಭದಲ್ಲಿ ಬೈಕ್ ಸವಾರ ಆಂಟನಿ ಅವರ ತಲೆ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು ವಿಪರೀತ ರಕ್ತಸ್ರಾವವಾಗಿದೆ. ಇನ್ನೊಂದು ಬೈಕಿನ ಸವಾರ ಅಶೋಕ್ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

Leave a Reply