Header Ads
Header Ads
Header Ads
Breaking News

ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕೆ ಉರುಳಿದ ಕಾರು ರಾ.ಹೆ. ಉಪ್ಪಿನಂಗಡಿ ಬಳಿ ನಡೆದ ಘಟನೆ ಸಮೀಪದ ಸಿಸಿಟಿವಿಯಲ್ಲಿ ದೃಶ್ಯ ಸೆರೆ

 

ಇಂಗ್ಲೀಷ್ ಚಲನ ಚಿತ್ರದ ಸಾಹಸಮಯ ದ್ರಶ್ಯದಂತೆ ಕಾರೊಂದು ಮೇಲ್ಭಾಗದ ರಸ್ತೆಯಿಂದ ಕೆಳಭಾಗದ ರಸ್ತೆಗೆ ಜಾರಿ ಬಂದ ಘಟನೆ ಗುರುವಾರ ಸಂಜೆ ೬:೩೦. ರ ಸುಮಾರಿಗೆ ಉಪ್ಪಿನಂಗಡಿ ಬಳಿಯ ೩೪ ನೇ ನೆಕ್ಕಿಲಾಡಿ ಬಳಿ ನಡೆದಿದೆ. ಇದು ಸಮೀಪದ ಬೈಕ್ ಶೋರೂಮೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಕಾರು ನೆಕ್ಕಿಲಾಡಿ ಬಳಿ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಕೆಳ ಭಾಗದ ರಸ್ತೆಗೆ ಜಾರಿ ಹೋಗಿದೆ. ಮಗುಚಿ ಬೀಳಲು ಕಾರು ಅಣಿಯಾಗಿದ್ದರೂ, ಅದ್ರಷ್ಟವಶಾತ್ ಕಾರು ನೇರವಾಗಿಯೇ ನಿಂತುಕೊನ್ಂಡಿದೆ. ಇದರಿಂದಾಗಿ ಕಾರಿಗಾಗಲಿ. ಚಾಲಕ ಸೇರಿದಂತೆ ಅದರಲ್ಲಿ ಇಬ್ಬರಿಗೂ ಯಾವುದೇ ಗಾಯಗಳಾಗಿಲ್ಲ. ಕಾರು ಕೆಳ ರಸ್ತೆಗೆ ಜಾರುವ ಕೆಳ ಹೊತ್ತಿನ ಮೊದಲು ಅಲ್ಲಿ ನಿಂತಿಜಜಚಿ. ಓಮ್ನಿ ಸೇರಿದಂತೆ ಮೂರು ಕಾರುಗಳು ಅಲ್ಲಿಂದ ತೆರಳಿತ್ತು. ಇದರಿಂದಾಗಿ ಸಂಭವನೀಯ ಅಪಾಯ ತಪ್ಪಿದೆ

Related posts

Leave a Reply