Header Ads
Breaking News

ನಿರಂತರ ಕಲಿಕೆಗೆ ಸಿನಿಮಾ ಪೂರಕ : ರಾಜ್ ಬಿ ಶೆಟ್ಟಿ

ಉಜಿರೆ : ಸಿನಿಮಾ ರಂಗದಲ್ಲಿ ಕಥೆ ಮತ್ತು ಚಿತ್ರಕಥೆಗಳ ತಯಾರಿಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ನಿತ್ಯವೂ ನಿರಂತರÀ ಕಲಿಕೆಗೆ ಅವಕಾಶ ಮಾಡಿಕೊಡುವ ಸಿನಿಮಾ ಹೊಸತುಗಳ ಹುಡುಕಾಟಕ್ಕೆ ಸಹಕಾರಿಯಾಗಿರುತ್ತದೆ ಎಂದು ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ಕಥೆಗಾರ ರಾಜ್ ಬಿ ಶೆಟ್ಟಿ ಹೇಳಿದರು.
ಇತ್ತೀಚೆಗೆ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಿದ್ದ ಚಿತ್ರಕಥೆ ತಯಾರಿಕೆಯ ಸಂವಾದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಒಂದು ಸಿನಿಮಾ ತಯಾರಾಗುವ ಮುನ್ನ ಕಥೆ ಮತ್ತು ಚಿತ್ರಕಥೆಗಳನ್ನು ಹೇಗೆ ತಯಾರಿಸಿಕೊಳ್ಳಬೇಕು. ಯಾವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಉತ್ತಮ ಸಿನಿಮಾ ಕಥೆಯನ್ನು ನಿರ್ಮಿಸಬೇಕು ಎಂದು ತಮ್ಮ ಅನುಭವಗಳೊಂದಿಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಗೆ ತಮ್ಮ ಕಲ್ಪನಾ ಶಕ್ತಿಯ ಅರಿವಾಗಲು, ಸ್ಥಳದಲ್ಲೇ ಒಂದು ಕಥೆಯನ್ನು ಯೋಚಿಸುವಂತಹ ಚಟುವಟಿಕೆಗಳನ್ನು ಮಾಡಿಸಿದರು.
ಜೊತೆಗೆ ಯಾವುದೇ ಹೊಸ ಕಥೆಯನ್ನು ಸೃಷ್ಟಿಸುವ ಮೊದಲು ಅಗಾಧವಾದ ಅಧ್ಯಯನ ಅಗತ್ಯ, ಅದಕ್ಕೆ ಪೂರಕವಾಗಿ ಸಾಕಷ್ಟು ಪುಸ್ತಕಗಳನ್ನು ಮತ್ತು ನಮ್ಮ ಸುತ್ತ ಮುತ್ತಲಿನ ಪರಿಸರವನ್ನು, ಜನ ಜೀವನವನ್ನು ಅರ್ಥೈಸಿಕೊಳ್ಳುವುದು ಮುಖ್ಯ ಎಂದು ಹೇಳುವುದರ ಮೂಲಕ ವಿದ್ಯಾರ್ಥಿಗಳಿಗೆ ಹ¯ವಾರು ಪುಸ್ತಕ ಮತ್ತು ಯೂಟ್ಯೂಬ್ ವಾಹಿನಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಮತ್ತು ಪ್ರಾಧ್ಯಾಪಕರಾದ ಸುನಿಲ್ ಹೆಗ್ಡೆ, ರಕ್ಷಿತ್ ರೈ ಹಾಗೂ ಉಪನ್ಯಾಸಕಿ ಶೃತಿ ಜೈನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *