Header Ads
Breaking News

ನಿರ್ವಹಣೆ ಇಲ್ಲದೆ ಸೊರಗಿ ಹೋಗಿದೆ ಮಲ್ಲಿಕಟ್ಟೆ ಗ್ರಂಥಾಲಯ ಪಾರ್ಕ್

ಹರಡಿಕೊಂಡಿರುವ ಮದ್ಯದ ಬಾಟಲಿಗಳು, ಆಹಾರ ಹಾಕಿ ತಿಂದು ಎಸೆಯಲಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳು, ರಾಶಿ ಬಿದ್ದಿರುವ ಕಸ, ನೀರಿಲ್ಲದೆ ಒಣಗಿ ಹೋಗಿರುವ ಗಿಡ, ಮುರಿದು ಬಿದ್ದಿರುವ ಕಲ್ಲು ಬೆಂಚುಗಳು.. ಹೌದು ಇವೆಲ್ಲ್ಲ ಕಂಡು ಬಂದಿರೋದು ಮಂಗಳೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಮಲ್ಲಿಕಟ್ಟೆ ಗ್ರಂಥಾಲಯ ಮುಂಭಾಗದ ಪಾರ್ಕ್… ಹಾಗಿದ್ರೆ ಪಾರ್ಕ್‍ನ ಸ್ಥಿತಿಗತಿ ಹೇಗಿದೆ ತೋರಿಸುತ್ತೇವೆ ನೋಡಿ..
ಮಂಗಳೂರಿನ ಹೃದಯ ಭಾಗದಲ್ಲಿರುವ ಮಲ್ಲಿಕಟ್ಟೆ ಗ್ರಂಥಾಲಯ ಮುಂಭಾಗದ ಪಾರ್ಕ್ ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿ ಹೋಗಿದೆ. ಪಾರ್ಕ್ ಒಳಗೆ ಹರಡಿಕೊಂಡಿರುವ ಮದ್ಯದ ಬಾಟಲಿಗಳು, ಆಹಾರ ಹಾಕಿ ತಿಂದು ಎಸೆಯಲಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳು, ರಾಶಿ ಬಿದ್ದಿರುವ ಕಸ, ನೀರಿಲ್ಲದೆ ಒಣಗಿ ಹೋಗಿರುವ ಗಿಡ, ಮುರಿದು ಬಿದ್ದಿರುವ ಕಲ್ಲು ಬೆಂಚುಗಳು..ಉದ್ಯಾನವನಗಳು ಜಂಜಾಟದಲ್ಲಿ ಇರುವ ಮನಸ್ಸುಗಳಿಗೆ ಪ್ರಪುಲ್ಲತೆ ನೀಡುವುದರ ಜೊತೆಗೆ ನಗರದ ಸೌಂದರ್ಯ ವೃದ್ಧಿಸುತ್ತದೆ, ಅದ್ರೆ ಉದ್ಯಾನವನ ನಿರ್ವಹಣೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಎಷ್ಟರ ಮಟ್ಟಿಗೆ ಉತ್ಸುಕವಾಗಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಇನ್ನು ಈ ಪಾರ್ಕ್‍ನ ರಕ್ಷಣೆಗೆ ಕಟ್ಟಲಾದ ಆವರಣ ಗೋಡೆ ಕುಸಿದು ಬಿದ್ದಿದೆ. ಇಲ್ಲಿರುವ ಗಿಡಗಳು ನೀರಿಲ್ಲದೆ ಒಣಗಿ ಹೋಗಿದೆ. ಕಲ್ಲು ಬೆಂಚುಗಳು ಮುರಿದು ಅನಾಥ ಸ್ಥಿತಿಯಲ್ಲಿದೆ.


ಇಲ್ಲಿ ಗ್ರಂಥಾಲಯವಿರುವುದರಿಂದ ದಿನಂಪತ್ರಿ ನೂರಾರು ಜನರು ಭೇಟಿ ನೀಡುತ್ತಾರೆ, ಅದ್ರೆ ಸೊರಗಿರುವ ಉದ್ಯಾವನ ಮನಸ್ಸಿನ ಬೇಸರ ಉಂಟು ಮಾಡುತ್ತಿದೆ. ಸ್ಮಾರ್ಟ್ ಆಗುತ್ತಿರುವ ಮಂಗಳೂರಿಗೆ ಇದು ಕಪ್ಪು ಚುಕ್ಕೆ. ಈ ಪಾರ್ಕ್‍ಗೆ ಆವರಣ ಗೋಡೆಯೂ ಇಲ್ಲ. ಜೊತೆಗೆ ಸಮೀಪದಲ್ಲಿರುವ ಸಾರ್ವಜನಿಕ ಬಸ್ ಸ್ಯಾಂಡ್‍ನಲ್ಲಿ ಭಿಕ್ಷುಕರು, ಅಲೆ ಮಾರಿಗಳು ಕಾಲ ಕಳೆಯುತ್ತಾರೆ. ಪಾರ್ಕ್‍ಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅದೆಷ್ಟೋ ಪಾರ್ಕ್‍ಗಳು ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿ ಹೋಗಿದೆ. ಮಂಗಳೂರು ನಗರದ ಪಾರ್ಕ್‍ಗಳನ್ನು ಪಾಲಿಕೆ ಅಭಿವೃದ್ಧಿ ಮಾಡಲಿದೆ. ಮಲ್ಲಿಕಟ್ಟೆಯಲ್ಲಿ ಸೊರಗಿದ ಪಾರ್ಕ್ ಗಮನಕ್ಕೆ ಬಂದಿದೆ. ಆವರಣ ಗೋಡೆ ಕುಸಿದು ಬಿರುವುದರಿಂದ ಅದರ ಅಭಿವೃದ್ಧಿ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಪಾರ್ಕ್‍ನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ –ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಯೋಜನೆಗಳಿವೆ. ಈ ಬಗ್ಗೆ ಅದ್ಯತೆ ನೀಡಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದ್ರು.
 ನಗರದಲ್ಲಿರುವ ಕದ್ರಿ ಪಾರ್ಕ್ ಹೊರತುಪಡಿಸಿದರೆ, ಪುರಭವನ ಎದುರಿನ ಗಾಂಧಿ ಪಾರ್ಕ್, ಬಾವುಟಗುಡ್ಡೆಯಯ ಟ್ಯಾಗೋರ್ ಪಾರ್ಕ್ , ನೆಹರೂ ಮೈದಾನ ಬಳಿಯ ಪಾರ್ಕ್ , ಮಣ್ಣಗುಡ್ಡೆ ಪಾರ್ಕ್ ಮೊದಲಾದವು ಪ್ರಮುಖವಾದುದು, ಕದ್ರಿ ಹಾಗೂ ಮಣ್ಣಗುಡ್ಡೆ ಉದ್ಯಾನವನ ಹೊರತುಪಡಿಸಿದರೆ, ಉಳಿದಂತೆ ಹೆಚ್ಚಿನ ಪಾರ್ಕ್‍ಗಳು ಸಮರ್ಪಕ ನಿರ್ವಹಣೆ ಇಲ್ಲದೇ ಸೊರಗಿ ಹೋಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲವೊಂದು ಯೋಜನೆಗಳಿಗೆ ದುಂದುವೆಚ್ಚ ಮಾಡುವುದಕ್ಕಿಂತ ಇಂಥ ಪಾರ್ಕ್‍ಗಳ ಅಭಿವೃದ್ಧಿಗೆ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲವೇ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಅದೇ ಏನೋ ಇರಲಿ ಪಾರ್ಕ್‍ಗಳ ಅಭಿವೃದ್ಧಿಗೆ ಮಂಗಳೂರು ಮಹಾನಗರ ಪಾಲಿಕೆ ಅಸಕ್ತಿ ವಹಿಸಲಿ ಎಂಬುವುದೇ ನಮ್ಮ ಆಶಯ.

Related posts

Leave a Reply

Your email address will not be published. Required fields are marked *