Header Ads
Breaking News

ನಿರ್ವಹಣೆ ಇಲ್ಲದೆ ಸೊರಗುತ್ತಿರುವ  ಕಾರ್ಕಳದ ರಂಗಮಂದಿರ

ಕಾರ್ಕಳದ ಪುರಸಭೆಯ ವ್ಯಾಪ್ತಿಯಲ್ಲಿರುವ ರಂಗಮಂದಿರವೊಂದು ಅವ್ಯವಸ್ಥೆಯ ಆಗದಲ್ಲಿದೆ. ಸರಿಯಾದ ನಿರ್ವಹಣೆ ಇಲ್ಲದೆ ಸುಣ್ಣ-ಬಣ್ಣ ಕಳಚಿ ಬೀಳುವ ಸ್ಥಿತಿಯಲ್ಲಿದೆ. ಶೌಚಾಲಯದಲ್ಲಿ ನೀರಿನ ಸೌಕರ್ಯವಿಲ್ಲದೆ ದುರ್ವಾಸನೆ ಬೀರುತ್ತಿದೆ. ಆದರೂ ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಕಾರ್ಕಳ ಪುರಸಭೆ ಮೌನವಹಿಸಿರುವುದು ವಿಷಾದನೀಯ ಸಂಗತಿಯಾಗಿದೆ.


ಆಗಿನ ನಗರಾಭಿವೃದ್ಧಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರಿಂದ ಕಾರ್ಕಳ ಪುರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿ ಮಹಾಮಸ್ತಾಭಿಷೇಕ ಉಳಿಕೆ ಹಣದಲ್ಲಿ ರಂಗಮಂದಿರದ ಶಂಕುಸ್ಥಾಪನೆಗೊಂಡು, 9.01.2017ರಲ್ಲಿ ಆಗಿನ ಮೀನುಗಾರಿಕೆ ಸಚಿವರಾದ ಪ್ರಮೋದ್ ಮಧ್ವರಾಜ್ ರಂಗಮಂದಿರವನ್ನು ಉದ್ಘಾಟಿಸಿದರು. ಕಾರ್ಕಳ ಪುರಸಭೆ ಅಧೀನದಲ್ಲಿರುವ ಇರುವ ಗಾಂಧಿ ಮೈದಾನದಲ್ಲಿ ಪ್ರತಿಯೊಂದು ಕಾರ್ಯಕ್ರಮ ಹಾಗೂ ಪಂದ್ಯಾಟಗಳಿಗೆ ಕಾರ್ಕಳ ಪುರಸಭೆಗೆ ರೂಪಾಯಿ 2000ವನ್ನು ಕೊಟ್ಟು ಪರವಾನಿಗೆ ಪಡಕೊಳ್ಳಬೇಕು. ಆದರೆ ಪುರಸಭೆ ರಂಗಮಂದಿರದ ಶುಚಿತ್ವಕ್ಕಾಗಿ ಒಂದೇ ಒಂದು ರೂಪಾಯಿ ಖರ್ಚು ಮಾಡಿದ ಹಾಗೆ ಕಾಣುತ್ತಿಲ್ಲ.

ರಂಗಮಂದಿರ ಉದ್ಘಾಟನೆಗೊಂಡ 4 ವರ್ಷದಲ್ಲಿ ಕಳೆಗುಂದಿದೆ ಮಳೆ ನೀರಿಗೆ ಗೋಡೆಗಳು ಒದ್ದೆಯಾಗಿ ಸುಣ್ಣಬಣ್ಣ ಕಳಚಿ ಬೀಳುವ ಪರಿಸ್ಥಿತಿ ಉಂಟಾಗಿದೆ. ಶೌಚಾಲಯದೊಳಗೆ ನೀರಿನ ಸೌಕರ್ಯವಿಲ್ಲದೆ ಗಬ್ಬು ವಾಸನೆಯಿಂದ ಒಳ ಪ್ರವೇಶಿಸುವಂತಿಲ್ಲ. ವಾಶ್ ಬೆಸ್ಸಿನ್‍ಗಳು ಗಲೀಜಿನಿಂದ ತುಂಬಿಕೊಂಡಿವೆ. ರಂಗಮಂದಿರದ ಸುತ್ತಮುತ್ತ ಕಸ ಹಾಗೂ ಬಾಟಲಿಗಳ ರಾಶಿ ಬಿದ್ದರೂ ಕೂಡ ಪುರಸಭೆ ಇದರ ಬಗ್ಗೆ ಗಮನ ಹರಿಸದಿರುವುದು ಆಶ್ಚರ್ಯದ ಸಂಗತಿಯಾಗಿದೆ.

ಮಳೆಗಾಲದ 3,4 ತಿಂಗಳುಬಿಟ್ಟರೆ ಬಾಕಿ ಸಮಯದಲ್ಲಿ ನಿರಂತರ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತದೆ. ಈ ಮೈದಾನದಿಂದ ಲಕ್ಷಗಟ್ಟಲೆ ಆದಾಯ ಪುರಸಭೆಗೆ ಇದ್ದರು ಪುರಸಭೆ ಗಾಂಧಿ ಗಾಂಧಿ ಮೈದಾನ ನಿರ್ವಹಣೆ ಹಾಗೂ ರಂಗಮಂದಿರದ ಶುಚಿತ್ವಕ್ಕೆ ಗಮನಹರಿಸದಿರುವುದು, ಹಾಗೂ ಮೈದಾನಕ್ಕೂ ಮಂದಿರಕ್ಕೂ ಒಂದೇ ಒಂದು ಸಿಬ್ಬಂದಿಯನ್ನು ನೇಮಿಸದೆ ಇರುವುದು ಆಶ್ಚರ್ಯದ ಸಂಗತಿಯಾಗಿದೆ ಎಂದು ಹೇಳುತ್ತಾರೆ ಕ್ರೀಡಾಳು ಒಬ್ಬರು. ಒಟ್ಟಿನಲ್ಲಿ ಒಂದು ರಂಗಮಂದಿ ಸ್ಥಾಪನೆ ಆಗಬೇಕಾದರೆ ಎಷ್ಟು ಕಷ್ಟಪಟ್ಟಿರಬಹುದು, ಆದರೆ ಸ್ಥಾಪನೆಯಾದ ಬಳಿಕ ಅದನ್ನು ಕಾಪಾಡಿಕೊಳ್ಳುವುದು ಪುರಸಭೆಯ ಜವಾಬ್ದಾರಿ. ಆದರೆ ಇವೆಲ್ಲದಕ್ಕೂ ಪುರಸಭೆ ಮೌನವಹಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ.

Related posts

Leave a Reply

Your email address will not be published. Required fields are marked *