Header Ads
Header Ads
Header Ads
Breaking News

ನಿವೃತ್ತ ಅಂಚೆ ಪಾಲಕ ಜಗತ್ಪಾಲ ಹೆಗ್ಡೆಗೆ ಅಭಿನಂದನೆ ಜನಸೇವೆ ಮಾಡಿದ ಪ್ರಾಮಾಣಿಕ ವ್ಯಕ್ತಿ ಮೂಡಬಿದರೆಯಲ್ಲಿ ಶಾಸಕ ಕೆ. ಅಭಯಚಂದ್ರ ಜೈನ್ ಅಭಿಪ್ರಾಯ

ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡಿ ಜನರ ಪ್ರೀತಿಗೆ ಪಾತ್ರರಾಗಿರುವ ವ್ಯಕ್ತಿ ಜಗತ್ಪಾಲ ಹೆಗ್ಡೆಯವರು. ಸರಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಅಂಚೆ ನೌಕರರಿಗೆ ಯೂನಿಯನ್ ಮೂಲಕ ಹೋರಾಟ ಮಾಡಿ ಬೆಂಬಲ ನೀಡಿರುವ ಅವರು ಕಳೆದ 40 ವರ್ಷಗಳಿಂದ ಸೇವೆಯನ್ನು ಮಾಡಿ ಗುರುತಿಸಿಕೊಂಡು ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.

ಜಗತ್ಪಾಲ ಎಸ್.ಹೆಗ್ಡೆ ಅಭಿನಂದನಾ ಸಮಿತಿ ಮತ್ತು ಅಭಿಮಾನಿ ಬಳಗ ಇದರ ವತಿಯಿಂದ ಮೂಡುಮಾರ್ನಾಡು ನೇತಾಜಿ ಸುಭಾಶ್ಚಂದ್ರ ಭೋಸ್ ಪ್ರೌಢಶಾಲೆಯ ನವರತ್ನ ರಂಗ ಮಂದಿರದಲ್ಲಿ ಭಾನುವಾರ ನಡೆದ ಮೂಡುಮಾರ್ನಾಡು ಉಪ ಅಂಚೆ ಕಛೇರಿಯಲ್ಲಿ 40 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾಗುತ್ತಿರುವ ಜಗತ್ಪಾಲ ಎಸ್.ಹೆಗ್ಡೆ ಇವರಿಗೆ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮಾಜಿ ಸಚಿವ, ಶಾಸಕ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ

ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ನಿದೇರ್ಶಕ ಭಾಸ್ಕರ್ ಎಸ್.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜಗತ್ಪಾಲ ಎಸ್.ಹೆಗ್ಡೆ-ಶ್ರೀಯಾಳ ಜೆ.ಹೆಗ್ಡೆ ದಂಪತಿಯನ್ನು ಅಭಿನಂದಿಸಲಾಯಿತು.

ಉಜಿರೆ ಎಸ್‌ಡಿ‌ಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶ್ರೀಧರ್ ಅವರು ಅಭಿನಂದನಾ ಭಾಷಣಗೈದರು. ಜಗತ್ಪಾಲ ಹೆಗ್ಡೆ ಅವರ ಸಂಬಂಧಿ ಸುಜಾತ ಅವರು ಅನಿಸಿಕೆಯನ್ನು ಹಂಚಿಕೊಂಡರು.

ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಜಗತ್ಪಾಲ ಹೆಗ್ಡೆ ಅವರು ಕನಿಷ್ಠ ವೇತನವನ್ನು ಪಡೆಯುತ್ತಿರುವ ಗ್ರಾಮೀಣ ಅಂಚೆ ನೌಕರರ ಬಗ್ಗೆ ಜನಪ್ರತಿನಿಧಿಗಳು ಬೇರೆ ಬೇರೆ ರಾಜಕರಣಿಗಳನ್ನು ಭೇಟಿಯಾಗಿ ಸಮಾನ ವೇತನ ಹಾಗೂ ಸಮಾನ ಉದ್ಯೋಗದ ಬಗ್ಗೆ ಚರ್ಚಿಸಿ ಅಂಚೆ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹೇಳಿದರು.

ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷ ಶ್ರೀನಾಥ್ ಸುವರ್ಣ, ತಾ.ಪಂ ಸದಸ್ಯ ಪ್ರಶಾಂತ್ ಅಮೀನ್, ಅಂಚೆ ನೌಕರರ ರಾಜ್ಯ ಉಪಾಧ್ಯಕ್ಷ ಪ್ರಮೋದ್ ಬಲಿಂಜೆ, ಕಾರ್ಕಳದ ಸಹಾಯಕ ಅಂಚೆ ಅಧೀಕ್ಷಕರು ಧನಂಜಯ ಆಚಾರ್ಯ, ಅ.ಭಾ.ಅಂ.ನೌ.ಸಂಘದ ರಾಜ್ಯ ಕಾರ್ಯದರ್ಶಿ ರುದ್ರೇಶ್, ಬೆಳುವಾಯಿ ಕಛೇರಿಯ ಉಪ ಅಂಚೆ ಪಾಲಕರಾದ ಉಷಾ, ಅಂಚೆ ಕಛೇರಿ ಕಟ್ಟಡದ ಮಾಲಿಕ ಕೃಷ್ಣಪ್ಪ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಭಿನಂದನಾ ಸಮಿತಿಯ ಅಧ್ಯಕ್ಷ ವಿಠಲ ಎಸ್.ಪೂಜಾರಿ ಉಪಸ್ಥಿತರಿದ್ದರು.

Related posts

Leave a Reply