Header Ads
Header Ads
Breaking News

ನಿವೃತ್ತ ಪೋಲೀಸ್ ನೇಣು ಬಿಗಿದು ಆತ್ಮಹತ್ಯೆ ಸೇಸಪ್ಪ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

 

ಪುತ್ತೂರು ನಗರ ಠಾಣೆಯ ನಿವೃತ್ತ ಎ.ಎಸ್. ಐ ಶೇಷಪ್ಪ ಪೂಜಾರಿ ಬಳ್ಳೇರಿ ರಕ್ಷತಾರಣ್ಯದ ಮೇಗಿನಪಂಜ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಇಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ. ಕುಂಜೂರುಪಂಜ ನಿವಾಸಿಯಾದ ಶೇಷಪ್ಪ ಪೂಜಾರಿಯವರು ಪುತ್ತೂರು ನಗರ ಠಾಣೆಯಲ್ಲಿ ಎ.ಎಸ್. ಐ ಯಾಗಿ ನಿವೃತ್ತಿ ಹೊಂದಿದ್ದರು.

ಪರ್ಲಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಾಗಿದ್ದ ಅವರು ನ.೨೦ರಂದು ಕುಂಜೂರುಪಂಜ ಮನೆಗೆ ತೆರಳಿದ್ದರು ಎನ್ನಲಾಗಿದೆ. ಬೆಳಗಿನ ಜಾವ ಅವರು ಬಳ್ಳೇರಿ ರಕ್ಷಿತಾರಣ್ಯದಲ್ಲಿ ಕುತ್ತಿಗೆಗೆ ಪಂಚೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರು ಪತ್ನಿ ಪಿ.ಎಸ್ ವಿಶಾಲಾಕ್ಷಿ, ಪುತ್ರರಾದ ಪಿ.ಎಸ್ ರಕ್ಷಿತ್ ಹಾಗು ಪಿ‌ಎಸ್ ಶೋಬಿತ್ರವರನ್ನು ಅಗಲಿದ್ದಾರೆ.

Related posts