Header Ads
Breaking News

ನೀರಿನ ಟ್ಯಾಂಕಿಗೆ ಬಿದ್ದು ಮಕ್ಕಳು ಸಾವನ್ನಪ್ಪಿದ ಪ್ರಕರಣ: ಮಕ್ಕಳ ಮನೆಗೆ ಸಚಿವ ಖಾದರ್ ಭೇಟಿ, ಸಾಂತ್ವನ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನೀರಿನ ಟ್ಯಾಂಕಿಗೆ ಬಿದ್ದು ಸಾವನ್ನಪ್ಪಿದ ಮೂವರು ಮಕ್ಕಳ ಮನೆಗೆ ಸಚಿವ ಯುಟಿ ಖಾದರ್ ಭೇಟಿ ನೀಡಿ ಸಾಂತ್ವನ ಹೇಳಿದ್ರು. ಅಲ್ದೇ ಪರಿಹಾರ ಕೊಡಿಸೋ ಭರವಸೆ ನೀಡಿದರು. ಇದೇ ವೇಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಚಿವ ಯುಟಿ ಖಾದರ್ ಪರಿಶೀಲನೆ ನಡೆಸಿದ್ರು. ನಿನ್ನೆ ಸಂಜೆ ಆಟವಾಡುವ ವೇಳೆಯಲ್ಲಿ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳ ಪಂಚಾಯತ್‌ನ ಕುಡಿಯುವ ನೀರಿನ ಟ್ಯಾಂಕ್ ಬಳಿ ಈ ದುರ್ಘಟನೆ ನಡೆದಿತ್ತು. ಒಂದೇ ಕುಟುಂಬದ ಮೂವರು ಮಕ್ಕಳಾದ ಜಿತೇಶ್, ವಿಸ್ಮಿತ ಮತ್ತು ಚೈತ್ರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

Related posts

Leave a Reply

Your email address will not be published. Required fields are marked *