Header Ads
Breaking News

ನೀರಿಲ್ಲದೆ ಸಂಪೂರ್ಣ ಬರಡಾಗಿದೆ ನೇತ್ರಾವತಿ ನದಿ!

 ಈ ಬಾರಿ ಕಂಡುಬಂದಿರುವ ಭೀಕರ ಬರ ಜನತೆಯನ್ನು ಸಾಕಷ್ಟು ಕಂಗೆಡಿಸಿದೆ. ನೀರಿಲ್ಲದೆ ಜನ-ಜಾನುವಾರುಗಳು ಕಂಗೆಟ್ಟಿದ್ದಾರೆ. ಬಿಸಿಲಿನ ತಾಪದಿಂದಾಗಿ ಜಲಮೂಲಗಳೆಲ್ಲವೂ ಬರಿದಾಗಿವೆ. ನದಿಗಳು ನೀರಿನ ಒರತೆಯನ್ನು ಕಳೆದುಕೊಂಡು ಆಟದ ಮೈದಾನದಂತೆ ಬರಡಾಗಿವೆ.

ಸ್ವಲ್ಪ ಒಣ ಭೂಮಿ, ಇನ್ನೂ ಸ್ವಲ್ಪ ಹುಲ್ಲುಗಾವಲು… ಆಟದ ಮೈದಾನದಂತೆ ಕಾಣುತ್ತಿರುವ ಈ ಸ್ಥಳ ಇದ್ಯಾವುದೋ ಮೈದಾನ ಅಂತಾ ನೀವು ಆಂದ್ಕೋಬಹುದು. ಆದ್ರೆ ಇದು ಯಾವುದೇ ಮೈದಾನವಲ್ಲ. ನೀರಿಲ್ಲದೆ ಬರಡಾಗಿರುವ ನದಿಯೆಂದರೆ ಅಚ್ಚರಿಯಾಗಬಹುದು. ಹೌದು. ಎಎಂಆರ್ ಡ್ಯಾಂ ಇರುವ ಸರಪಾಡಿ ಗ್ರಾಮದ ಪೆರ್ಲ, ಬೀಯಪಾದೆ ಸಮೀಪ ಕಾಣುತ್ತಿರುವ ಜೀವನದಿ ನೇತ್ರಾವತಿಯ ಸದ್ಯದ ದೃಶ್ಯವಿದು.

 ಸಾಮಾನ್ಯವಾಗಿ ಡ್ಯಾಂ ಇರುವ ಪ್ರದೇಶ ನೀರಿನಿಂದ ಸಮೃದ್ದವಗಿರುತ್ತದೆ. ಆದರೆ ಸರಪಾಡಿ ಭಾಗದಲ್ಲಿ ಒಳ ಹರಿವು ಇಲ್ಲದೆ ನದಿ ಬತ್ತಿ ಹೋಗಿದೆ. ಮಧ್ಯದಲ್ಲಿ ಓಯಸಿಸ್‌ನಂತೆ ನೀರು ಕಾಣಿಸಿಕೊಂಡರೆ ಸುತ್ತಮುತ್ತಲೆಲ್ಲಾ ಬಂಡೆ ಕಲ್ಲು ಹಾಗೂ ಒಣ ಭೂಮಿ ಮಾತ್ರ ಗೋಚರಿಸುತ್ತಿದೆ. ಈ ಬಾರಿಯ ಬಿಸಿಲಿನ ತಾಪ ನದಿಯನ್ನು ಬರಿದಾಗಿಸಿದೆ. ಜಿಲ್ಲೆಯ ಕೆಲವೆಡೆ ಅಪರೂಪಕ್ಕೊಮ್ಮೆ ಮಳೆ ಕಾಣಿಸಿಕೊಂಡರೂ ನದಿಗೆ ನೀರು ಹರಿದು ಬಂದಿಲ್ಲ.

ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾದಾಗಲೂ ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿದೆ ಎನ್ನುವ ಆಶಾಭಾವನೆಯಿತ್ತು. ಕಳೆದ ಎಪ್ರಿಲ್ ತಿಂಗಳಿನಲ್ಲಿಯೇ ಎಎಂಆರ್ ಡ್ಯಾಂ ಬರಿದಾಗಿದ್ದು ನದಿ ಸೊರಗಿದಂತೆ ಕಾಣುತ್ತಿದೆ. ನದಿ ನೀರನ್ನೇ ನಂಬಿರುವ ಈ ಭಾಗದ ರೈತರು ಕಂಗಲಾಗಿದ್ದಾರೆ. ಕೇವಲ ಮಳೆಯೊಂದೇ ನೀರಿನ ಸಮಸ್ಯೆಯನ್ನು ನೀಗಿಸುವ ಮೂಲವಾಗಿದೆ.

Related posts

Leave a Reply

Your email address will not be published. Required fields are marked *